
ಬೀದರ್ (ಡಿ.25): ರಾಜ್ಯದಲ್ಲಿ ಬಯಲಿಗೆ ಬಂದ ಸೆಕ್ಸ್ ಸ್ಕ್ಯಾಂಡಲ್ಗಳಲ್ಲಿ ಜನಪ್ರತಿನಿಧಿಗಳದ್ದೆ ಬಹುಪಾಲು. ಆದರೆ ಈಗ ಆ ಪಟ್ಟಿಯಲ್ಲಿ ಬಿಇಒ ಹೆಸರು ಕೇಳಿಬಂದಿದೆ. ಪವಿತ್ರವಾದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಈತ ತನ್ನ ಕೆಳ-ಹಂತದ ಶಿಕ್ಷಕನನ್ನೇ ಸಲಿಂಗಕಾಮಕ್ಕೆ ಕರೆದಿರುವ ಘಟನೆ ನಡೆದಿದೆ.
ಶೈಕ್ಷಣಿಕ ಗುಣಮಟ್ಟ ಮತ್ತು ಆಡಳಿತ ಸುಧಾರಣೆ ಮಾಡುವ ಜವಾಬ್ದಾರಿ ಹೊತ್ತಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಿಇಒ ವಸಂತಕುಮಾರ್ ಬಿ.ಸಿ. ಎಂಬಾತ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕನೊಬ್ಬನನ್ನು ಸಲಿಂಗಕಾಮಕ್ಕೆ ಆಹ್ವಾನಿಸಿದ್ದಾನೆ.
ಈ ಸಲಿಂಗಕಾಮಿಯ ಪೋಲಿ ಸಂಭಾಷಣೆ ಆಡಿಯೋ ಕ್ಲಿಪ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.
ಶಿಕ್ಷಕರ ಸಭೆಯಲ್ಲಿ ಬಿಇಓ ವಸಂತ್ ಕುಮಾರ್ ಈ ಅಮಾಯಕ ಶಿಕ್ಷಕನನ್ನು ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ನಿತ್ಯವೂ ಫೋನ್ ಮಾಡಿ ಬೀದರ್ನಲ್ಲಿನ ತನ್ನ ಕೊಠಡಿಗೆ ಬರುವಂತೆ ಆಹ್ವಾನಿಸಿದ್ದಾನೆ. ಅಲ್ಲೆ ಇಡೀ ರಾತ್ರಿ ಸೆಕ್ಸ್ ನಡೆಸೋಣ ಎಂದು ಕೂಡ ಹೇಳಿದ್ದಾನೆ.
ಈ ಬಗ್ಗೆ ನಮ್ಮ ಪ್ರತಿನಿಧಿ, ಬಿಇಒ ವಸಂತ್ ಕುಮಾರ್ರನ್ನ ಸಂಪರ್ಕಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪರ್ಸನಲ್ ಆಗಿ ಮಾತನಾಡೋಣ ಈಗ ಚರ್ಚೆ ಬೇಡ ಎಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.