ಕೇಂದ್ರ ಗೃಹ ಇಲಾಖೆ ವೆಬ್'ಸೈಟ್ ಹ್ಯಾಕ್ : 4 ವರ್ಷಗಳಲ್ಲಿ 700 ವೆಬ್'ಸೈಟ್ ಹ್ಯಾಕ್

By Suvarna Web DeskFirst Published Feb 12, 2017, 5:48 AM IST
Highlights

ಕಳೆದ ತಿಂಗಳು ಪಾಕ್ ಶಂಕಿತರು ರಾಷ್ಟ್ರೀಯ ಭದ್ರತಾ ದಳದ ವೆಬ್'ಸೈಟ್'ಅನ್ನು ಹ್ಯಾಕ್ ಮಾಡಿ ರಾಷ್ಟ್ರ ವಿರೋಧಿ ಬರಹದೊಂದಿಗೆ ಪ್ರಧಾನ ಮಂತ್ರಿಗೆ ನಿಂದಿಸಿದ ಸಂದೇಶ ಸಹ ಪೋಸ್ಟ್ ಮಾಡಿದ್ದರು.

ನವದೆಹಲಿ(ಫೆ.12): ಇತ್ತೀಚಿನ ದಿನಗಳಲ್ಲಿ ಹ್ಯಾಕರ್ಸ್'ಗಳು ಖಾಸಗಿ ವೆಬ್'ಸೈಟ್ ಬಿಟ್ಟು ಸರ್ಕಾರಿ ವೆಬ್'ಸೈಟ್ ಹ್ಯಾಕ್ ಮಾಡಲು ಶುರು ಮಾಡಿದ್ದಾರೆ. ಈಗ ಹ್ಯಾಕರ್ಸ್'ಗಳಿಗೆ ತುತ್ತಾಗಿರುವುದು ಕೇಂದ್ರ ಗೃಹ ಇಲಾಖೆಯ ವೆಬ್'ಸೈಟ್.  ಹ್ಯಾಕ್ ಆದ ತಕ್ಷಣವೇ  ರಾಷ್ಟ್ರೀಯ ಇನ್ಫರ್ಮ್ಯಾಟಿಕ್ಸ್ ಕೇಂದ್ರದ ಮೂಲಕ ಗೃಹ  ಇಲಾಖೆ ವೆಬ್'ಸೈಟ್'ಅನ್ನು ಬ್ಲ್ಯಾಕ್ ಮಾಡಿದೆ. ಕಂಪ್ಯೂಟರ್ ತುರ್ತು ನಿರ್ವಹಣಾ ತಂಡಗಳು ಹ್ಯಾಕರ್ಸ್ ಬಗ್ಗೆ  ಮಾಹಿತಿ ಕಲೆ ಹಾಕುತ್ತಿದೆ.

ಕಳೆದ ತಿಂಗಳು ಪಾಕ್ ಶಂಕಿತರು ರಾಷ್ಟ್ರೀಯ ಭದ್ರತಾ ದಳದ ವೆಬ್'ಸೈಟ್'ಅನ್ನು ಹ್ಯಾಕ್ ಮಾಡಿ ರಾಷ್ಟ್ರ ವಿರೋಧಿ ಬರಹದೊಂದಿಗೆ ಪ್ರಧಾನ ಮಂತ್ರಿಗೆ ನಿಂದಿಸಿದ ಸಂದೇಶ ಸಹ ಪೋಸ್ಟ್ ಮಾಡಿದ್ದರು. ಕಳೆದ ಒಂದು ತಿಂಗಳು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ 4 ವರ್ಷದಿಂದ ದೇಶದಾದ್ಯಂತ ಕೇಂದ್ರ, ರಾಜ್ಯ ಸರ್ಕಾರಗಳನ್ನು ಒಳಗೊಂಡು ಹಲವು ಇಲಾಖೆಗಳ 700ಕ್ಕೂ ಹೆಚ್ಚು ವೆಬ್'ಸೈಟ್ ಹ್ಯಾಕ್ ಆಗಿದ್ದು, ಸೈಬರ್ ಅಪರಾಧದ ಹಿನ್ನೆಲೆಯಲ್ಲಿ ಭಾಗಿಯಾಗಿದ್ದ 8348 ಮಂದಿಯನ್ನು ಬಂಧಿಸಲಾಗಿದೆ.

click me!