ಬುರ್ಖಾ ಹಾಕಿಕೊಂಡು ಬಂದ ಹಿಂದೂ ಮಹಿಳೆಗೆ ಏರ್'ಪೋರ್ಟ್'ನಲ್ಲಿ ತಡೆ

By Suvarna Web DeskFirst Published Sep 29, 2017, 4:54 PM IST
Highlights

ಬುರ್ಖಾ ಹಾಕಿಕೊಂಡು ಬಂದ ಹಿಂದೂ ಮಹಿಳೆಯನ್ನು ಇಂದಿರಾ ಗಾಂಧಿ ಏರ್’ಪೋರ್ಟ್’ನ ಅಧಿಕಾರಿಗಳು ತಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  

ನವದೆಹಲಿ (ಸೆ.29): ಬುರ್ಖಾ ಹಾಕಿಕೊಂಡು ಬಂದ ಹಿಂದೂ ಮಹಿಳೆಯನ್ನು ಇಂದಿರಾ ಗಾಂಧಿ ಏರ್’ಪೋರ್ಟ್’ನ ಅಧಿಕಾರಿಗಳು ತಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  

ಮಹಿಳೆಯ ಫ್ಲೈಟ್ ಟಿಕೆಟ್’ನಲ್ಲಿ ಹಿಂದೂ ಹೆಸರಿದ್ದು ಆಕೆ ಬುರ್ಖಾ ಹಾಕಿರುವುದು ನೋಡಿ ಅಲ್ಲಿನ ಅಧಿಕಾರಿಗಳಿಗೆ ಸಂಶಯ ಬಂದು ತಡೆದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ “ಮಧ್ಯಪ್ರದೇಶ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನ ಜೊತೆ ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದೇನೆ. ಅವರು ನನ್ನ ಭಾವೀ ಪತಿ. ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೆ. ನನ್ನ ತಾಯಿಯ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಬುರ್ಖಾ ಹಾಕಿದ್ದೆ ಎಂದು ಮಹಿಳೆ ಹೇಳಿರೋದಾಗಿ ಅಧಿಕಾರಿಗಳು ಹೇಳಿದ್ದಾರೆ.  

ಅವರ ವರ್ತನೆ ಅನುಮಾನಾಸ್ಪದವಾಗಿಲ್ಲದೇ ಇರುವುದರಿಂದ ಕೊನೆಗೆ ಅವರನ್ನು ಬಿಡಲಾಯಿತು.   

click me!