ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್?

By Suvarna Web DeskFirst Published Jan 21, 2018, 7:54 AM IST
Highlights

ಸರ್ಕಾರಿ ನೌಕರರು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಆರನೇ ವೇತನ ಆಯೋಗದ ವರದಿ ಬಹುತೇಕ ಜ.24 ಅಥವಾ 25 ರಂದು ಸರ್ಕಾರಕ್ಕೆ  ಸಲ್ಲಿಕೆಯಾಗಲಿದ್ದು, ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ರಾಜ್ಯ  ಸರ್ಕಾರ ಶೇ.30 ರಿಂದ 35 ರಷ್ಟು ವೇತನ ಹೆಚ್ಚಳಕ್ಕೆ ಈ ಬಾರಿ ಮುಂದಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ. ಆಯೋಗ ಮುಂದಿನ ವಾರದಲ್ಲಿ ವರದಿ ಸಲ್ಲಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ  16 ರಂದು ಮಂಡಿಸುವ ರಾಜ್ಯ ಬಜೆಟ್'ನಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಘೋಷಣೆ ಮಾಡಲಿದ್ದಾರೆ. ಇದರಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ  5.45 ಲಕ್ಷ ನೌಕರರಿಗೆ ವೇತನದಲ್ಲಿ ಹೆಚ್ಚಳ ಹಾಗೂ 11 ಲಕ್ಷ ನಿವೃತ್ತರಿಗೆ ಭತ್ಯೆಗಳು ಹೆಚ್ಚಾಗಲಿವೆ. ಇದರ ಜೊತೆಗೆ ಸರ್ಕಾರದ  ವಿವಿಧ ನಿಗಮ ಮಂಡಳಿ ನೌಕರರಿಗೂ ವೇತನ ಹೆಚ್ಚಾಗಲಿದೆ ಎಂದು ಈ ಮೂಲಗಳು ವಿವರಿಸುತ್ತವೆ.

ಬೆಂಗಳೂರು (ಜ.21): ಸರ್ಕಾರಿ ನೌಕರರು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಆರನೇ ವೇತನ ಆಯೋಗದ ವರದಿ ಬಹುತೇಕ ಜ.24 ಅಥವಾ 25 ರಂದು ಸರ್ಕಾರಕ್ಕೆ  ಸಲ್ಲಿಕೆಯಾಗಲಿದ್ದು, ಚುನಾವಣೆ ಸಮೀಪವಿರುವ ಹಿನ್ನೆಲೆಯಲ್ಲಿ ರಾಜ್ಯ  ಸರ್ಕಾರ ಶೇ.30 ರಿಂದ 35 ರಷ್ಟು ವೇತನ ಹೆಚ್ಚಳಕ್ಕೆ ಈ ಬಾರಿ ಮುಂದಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ. ಆಯೋಗ ಮುಂದಿನ ವಾರದಲ್ಲಿ ವರದಿ ಸಲ್ಲಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ  16 ರಂದು ಮಂಡಿಸುವ ರಾಜ್ಯ ಬಜೆಟ್'ನಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಘೋಷಣೆ ಮಾಡಲಿದ್ದಾರೆ. ಇದರಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ  5.45 ಲಕ್ಷ ನೌಕರರಿಗೆ ವೇತನದಲ್ಲಿ ಹೆಚ್ಚಳ ಹಾಗೂ 11 ಲಕ್ಷ ನಿವೃತ್ತರಿಗೆ ಭತ್ಯೆಗಳು ಹೆಚ್ಚಾಗಲಿವೆ. ಇದರ ಜೊತೆಗೆ ಸರ್ಕಾರದ  ವಿವಿಧ ನಿಗಮ ಮಂಡಳಿ ನೌಕರರಿಗೂ ವೇತನ ಹೆಚ್ಚಾಗಲಿದೆ ಎಂದು ಈ ಮೂಲಗಳು ವಿವರಿಸುತ್ತವೆ.

ರಾಜ್ಯ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸರಿಸಮನಾಗಿ ತಮಗೆ ವೇತನ ದೊರೆಯಬೇಕು ಎಂಬ ಬಲವಾದ ಬೇಡಿಕೆಯನ್ನಿಟ್ಟಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಿದರೆ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುವ ಕಾರಣ ಸರ್ಕಾರ ಶೇ.30 ರಿಂದ 35 ರ ಆಸುಪಾಸು ವೇತನ ಹೆಚ್ಚಳ ಮಾಡಬಹುದು ಎಂಬುದು ಮೂಲಗಳ ವಿವರಣೆ. ಈವರೆಗೆ ಅಧಿಕಾರಿಗಳ ವೇತನ ಸಮಿತಿ ಇಲ್ಲವೇ ಸಚಿವ ಸಂಪುಟದ ಉಪಸಮಿತಿಗಳು ವೇತನ ಮಾತ್ರ ಹೆಚ್ಚಳ ಮಾಡುತ್ತಿದ್ದವು. ಆದರೆ ಈ ಬಾರಿ ವೇತನ ಆಯೋಗ ನೌಕರರ ವೇತನ ಶ್ರೇಣಿಯನ್ನೇ ಬದಲಾವಣೆ ಮಾಡು ವುದಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ.

ಇದರಿಂದಾಗಿ ಸರ್ಕಾರಿ ನೌಕರರ ವೇತನ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ಡಾ.ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆಯೋಗ ಈಗಾಗಲೇ ಎಲ್ಲ ಇಲಾಖೆಗಳ ವಿವಿಧ ಹಂತದ ಅಧಿಕಾರಿಗಳು, ನೌಕರರ ವೇತನ, ಪಡೆಯುತ್ತಿರುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದೆ.

ಅಲ್ಲದೇ ವಿವಿಧ ಸರ್ಕಾರಿ ನೌಕರರ ಸಂಘಟನೆಗಳು  ಪ್ರತ್ಯೇಕವಾಗಿ ಸಲ್ಲಿಸಿರುವ ಅಹವಾಲು ಅಲಿಸಿ ಪರಿಶೀಲಿಸಿದ್ದು, ವರದಿ ಸಲ್ಲಿಕೆಗೆ ಅಂತಿಮ ರೂಪ ಕೊಡುತ್ತಿದೆ. ಜ.31 ರೊಳಗೆ ವರದಿ ಸಲ್ಲಿಸಲು ಕಾಲ ನಿಗದಿ ಮಾಡಿರುವುದರಿಂದ ಶನಿವಾರ ಆಯೋಗದ ಸಭೆ ನಡೆಯಿತು.

ಶೇ.45 ರಷ್ಟು ವೇತನ ಹೆಚ್ಚಳ ಮಾಡಬೇಕೆಂಬುದು ಸರ್ಕಾರಿ ನೌಕರರ ಬಲವಾದ ಬೇಡಿಕೆಯಾಗಿದೆ. ಒಂದು ವೇಳೆ ಶೇ.45 ರಷ್ಟು ವೇತನ ಹೆಚ್ಚಳ ಮಾಡಿದರೆ ಕೇಂದ್ರ ಸರ್ಕಾರದ 7 ನೇ ವೇತನ ಆಯೋಗ ಶಿಫಾರಸು ಮಾಡಿದಷ್ಟೇ ರಾಜ್ಯದ ನೌಕರರಿಗೂ ವೇತನ ಹೆಚ್ಚಳವಾಗಲಿದೆ. ಆದರೆ ಈ ಪ್ರಮಾಣದಲ್ಲಿ ವೇತನ ಜಾಸ್ತಿ ಮಾಡಿದರೆ ಸಹಜವಾಗಿ ಸರ್ಕಾರದ ಬೊಕ್ಕಸಕ್ಕೆ  ಹೊರೆಯಾಗುವುದಂತೂ ನಿಶ್ಚಿತ. ಹಾಗಾಗಿ ಆಯೋಗ ಶೇ.30 ರಿಂದ 35 ರಷ್ಟು ವೇತನ ಹೆಚ್ಚಳ ಮಾಡಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಯಾವ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಿದರೆ ಸರ್ಕಾರಕ್ಕೆ ಹೊರೆ ಭರಿಸುವ ಶಕ್ತಿ ಇದೆ ಎಂಬ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ. ಶೇ.27, 30, 35, 37, 40 ಹಾಗೂ ಶೇ.45 ರಷ್ಟು ಹೆಚ್ಚಳ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಕೋಟಿ ಹೊರೆ  ಬೀಳಬಹುದು ಎಂಬ ಬಗ್ಗೆ ಅಳೆದು ತೂಗಿ ಲೆಕ್ಕ ಮಾಡಲಾಗುತ್ತಿದೆ. ಜಿಎಸ್‌ಟಿ ಸೇರಿದಂತೆ ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹ ಕೂಡಾ ಉತ್ತಮವಾಗಿರುವುದಿಂದ ಸರ್ಕಾರದ ಆರ್ಥಿಕ ಶಕ್ತಿ ಸಾಕಷ್ಟು ಬಲವಾಗಿದೆ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಶೇ.30 ರಿಂದ 35 ರಷ್ಟು ವೇತನ ಹೆಚ್ಚಳಕ್ಕೆ ಸಿದ್ಧವಾಗಿದೆ ಎಂಬುದು ಮೂಲಗಳ ವಿವರಣೆ.

 

click me!