ಹೊಸ ವಾದವನ್ನು ಮುಂದಿಟ್ಟಿದ್ದಾರೆ ಜುಕನ್ ಬರ್ಗ್; ಇದರಿಂದ ಆಡಳಿತ ಇನ್ನಷ್ಟು ಸುಲಭ

By Suvarna Web DeskFirst Published Feb 17, 2017, 2:54 PM IST
Highlights

ಪ್ರತಿನಿತ್ಯ ಮಿಲಿಯನ್ ಗಿಂತಲೂ ಹೆಚ್ಚಿನ ಮಂದಿ ಫೇಸ್ ಬುಕ್ಕನ್ನು ಬಳಸುತ್ತಾರೆ. ಬಹುತೇಕ ಜನ ಹೆಚ್ಚಿನ ಸಮಯವನ್ನು ಇಲ್ಲಿ ಕಳೆಯುತ್ತಾರೆ. ಕೆಲವರು ಸ್ನೇಹಿತರನ್ನು ಹುಡುಕುವುದು, ಚಾಟ್ ಮಾಡುವುದು ಮಾಡಿದರೆ ಇನ್ನು ಕೆಲವರು ಹೊಸ ಹೊಸ ಸುದ್ಧಿಗಳನ್ನು ಹುಡುಕುತ್ತಾರೆ. ಇದೊಂದು ಅಭ್ಯಾಸವಾಗಿಬಿಟ್ಟಿದೆ.  ಫೇಸ್ ಬುಕ್ ಪ್ರಭಾವಶಾಲಿ ಸಂವಹನ, ಸಂಪರ್ಕ ಮಾಧ್ಯಮ ಎನ್ನುವುದರಲ್ಲಿ ಅನುಮಾನವಿಲ್ಲ. ಇದು ಇಷ್ಟಕ್ಕೆ ಸೀಮಿತವಾಗುವ ಬದಲು ಆಡಳಿತ ಮಾಧ್ಯಮವಾಗಬೇಕು ಎನ್ನುವ ಹೊಸ ವಾದವನ್ನು ಮುಂದಿಟ್ಟಿದ್ದಾರೆ ಫೇಸ್ ಬುಕ್ ಮಾಲಿಕ ಜುಕನ್ ಬರ್ಗ್!

 ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ ಸಾಧಿಸಲು ಹೊರಟಿದ್ದಾರೆ ಜುಕನ್ ಬರ್ಗ್. ಜನಪ್ರತಿನಿಧಿಗಳ ಜೊತೆ ಸಾಮಾನ್ಯರು, ಸಾಮಾನ್ಯರ ಜೊತೆ ನಾಯಕರ ಜೊತೆ ರಾಜಕೀಯ ಸಂಪರ್ಕವನ್ನು ಹೊಂದಬಹುದು. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ತಮ್ಮ ಫೇಸ್ ಬುಕ್ ಪೇಜಿನಲ್ಲಿ ಜಾಗತಿಕ ಸಮೂಹವನ್ನು ಕಟ್ಟುವ ಕನಸನ್ನು ವ್ಯಕ್ತಪಡಿಸಿರುವ ಬರ್ಗ್, ಈ ಬಗ್ಗೆ 5700 ಪದಗಳಿರುವ ಸುದೀರ್ಘ ಲೇಖನವನ್ನು ಬರೆದಿದ್ದಾರೆ.

ತಮ್ಮ ಬರಹದಲ್ಲಿ ಪ್ರಧಾನಿ ಮೋದಿಯನ್ನು ಉದಾಹರಿಸುತ್ತಾ, ಮೋದಿಯವರು ತಮ್ಮ ಸಚಿವರಿಗೆ ಅವರವರ ಅಭಿಪ್ರಾಯಗಳನ್ನು ಹಾಗೂ ಸಚಿವಾಲಯದ ಮಾಹಿತಿ, ಸಭೆಯ ಪ್ರಮುಖ ಅಂಶಗಳು, ಹೊಸ ಯೋಜನೆಗಳು, ಗುರಿಗಳನ್ನು ಫೇಸ್ ಬುಕ್ ಪೇಜಿನಲ್ಲಿ ಬರೆದು ಜನರಿಗೆ ಮಾಹಿತಿ ನೀಡಬೇಕು. ಇದು ಜನಪ್ರತಿನಿಧಿಗಳು ಮತ್ತು ಜನರ ನಡುವೆ ಸಂಪರ್ಕ ಸಾಧಿಸಲು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

click me!