
ಬೆಂಗಳೂರು: ಚಿತ್ರದುರ್ಗ ಮೂಲದ ಆರು ವರ್ಷದ ಬಾಲಕಿಯ ಹೃದಯವನ್ನು ಆಂಧ್ರಪ್ರದೇಶ ಮೂಲದ 9 ವರ್ಷದ ಬಾಲಕನಿಗೆ ಕಸಿ ಮಾಡುವಲ್ಲಿ ರಾಮಯ್ಯ ಆಸ್ಪತ್ರೆ ನಾರಾಯಣ ಹಾರ್ಟ್ ಕೇರ್ ಸೆಂಟರ್ ವೈದ್ಯರು ಯಶಸ್ವಿ ಯಾಗಿದ್ದಾರೆ. ಮನಿಂಜಿಯೋಮಾ (ಮೆದುಳಿನಲ್ಲಿ ಗಡ್ಡೆ) ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಬಾಲಕಿಯ ಮಿದುಳು ನಿಷ್ಕ್ರಿಯ ಗೊಂಡಿತ್ತು. ಬಳಿಕ ಆಸ್ಪತ್ರೆ ವೈದ್ಯರು ಅಂಗಾಂಗ ದಾನ ಮಾಡಲು ಬಾಲಕಿಯ ಪೋಷಕರ ಮನವೊಲಿಸಿದ್ದರು.ತಕ್ಷಣ ಎಚ್ಚೆತ್ತ ವೈದ್ಯರು ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಹೃದಯ ಕಾವಟು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕನಿಗೆ ಹೃದಯ ಕಸಿ ಮಾಡಿದರು.
ಏರ್ ಆ್ಯಂಬುಲೆನ್ಸ್ ಬಳಕೆ: ಎ.ಜಿ. ಆಸ್ಪತ್ರೆಯ ವೈದ್ಯರು ಮೆದುಳು ನಿಷ್ಕ್ರಿಯ ಗೊಂಡಿರುವುದು ಖಚಿತಪಡಿಸಿದ ಕೂಡಲೇ ವಿಮಾನದ ಮೂಲಕ ಮಂಗಳೂರು ತೆರಳಿದ ಬೆಂಗಳೂರು ವೈದ್ಯರ ತಂಡವು, ಬಾಲಕಿಯ ಹೃದಯವನ್ನು ಏರ್ ಆ್ಯಂಬುಲೆನ್ಸ್ ಮೂಲಕ ಗುರುವಾರ ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಂದರು.
ಅಲ್ಲಿಂದ 36 ಕಿ.ಮೀ. ದೂರದಲ್ಲಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸಂಚಾರ ಪೊಲೀಸರು ಗ್ರೀನ್‌ಕಾರಿಡಾರ್ ವ್ಯವಸ್ಥೆಯೊಂದಿಗೆ 24 ನಿಮಿಷಗಳಲ್ಲೇ ಹೃದಯ ತಲುಪಿಸಲಾಯಿತು. ಬಳಿಕ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರಾದ ಯು.ಎಂ. ನಾಗಮಲ್ಲೇಶ್ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.