ಮೋದಿ ಕೇರ್’ಗೆ ಬೇಕು ವರ್ಷಕ್ಕೆ 1 ಲಕ್ಷ ಕೋಟಿ..!

By Suvarna Web DeskFirst Published Feb 5, 2018, 9:17 AM IST
Highlights

ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ದೇಶದ ಎಲ್ಲ ಬಡವರಿಗೆ ಆರೋಗ್ಯ ಸೇವೆ ಒದಗಿ ಸುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ವರ್ಷಕ್ಕೆ 1 ಲಕ್ಷ ಕೋಟಿ ರು. ಬೇಕಾಗುತ್ತದೆ. ಕೇಂದ್ರ ಸರ್ಕಾರ ಹೇಳಿಕೊಂಡಂತೆ 10ರಿಂದ 12 ಸಾವಿರ ಕೋಟಿ ರು. ಸಾಲುವುದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ನವದೆಹಲಿ: ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ ದೇಶದ ಎಲ್ಲ ಬಡವರಿಗೆ ಆರೋಗ್ಯ ಸೇವೆ ಒದಗಿ ಸುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ವರ್ಷಕ್ಕೆ 1 ಲಕ್ಷ ಕೋಟಿ ರು. ಬೇಕಾಗುತ್ತದೆ. ಕೇಂದ್ರ ಸರ್ಕಾರ ಹೇಳಿಕೊಂಡಂತೆ 10ರಿಂದ 12 ಸಾವಿರ ಕೋಟಿ ರು. ಸಾಲುವುದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ದೇಶದ ಎಲ್ಲರಿಗೂ ಆರೋಗ್ಯ ವಿಮೆ ನೀಡುವ ಅಮೆರಿಕದಲ್ಲಿದ್ದ ಒಬಾಮಾ ಕೇರ್ ಮಾದರಿಯಲ್ಲಿ ಇದು ಮೋದಿಕೇರ್ ಯೋಜನೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಈ ಯೋಜನೆ ಜಾರಿಯಾಗಬೇಕಾದರೆ ವರ್ಷಕ್ಕೆ ಕನಿಷ್ಠ 1 ಲಕ್ಷ ಕೋಟಿ ಬೇಕಾಗುತ್ತದೆ. ಕೇಂದ್ರ ಶೇ.60ರಷ್ಟು ಹಣ ನೀಡಿದರೂ ರಾಜ್ಯ ಸರ್ಕಾರಗಳು ಇನ್ನುಳಿದ ಹಣ ಹೊಂದಿಸಲು ಸಾಧ್ಯವಿಲ್ಲ.

ಮೇಲಾಗಿ, ಆರೋಗ್ಯ ಕ್ಷೇತ್ರದಲ್ಲಿ ತಮಗೆ ಬೇಕಾದ ಯೋಜನೆ ಜಾರಿಗೊಳಿಸುವ ಸ್ವಾಯತ್ತೆಯನ್ನು ಇದು ರಾಜ್ಯಗಳಿಂದ ಕಿತ್ತುಕೊಳ್ಳಲಿದೆ. ಆದಾಯ ತೆರಿಗೆಯ ಮೇಲೆ ಶೇ.1ರಷ್ಟು ಸೆಸ್ ಹೆಚ್ಚಿಸುವ ಮೂಲಕ ಇದಕ್ಕೆ ಹಣ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದ್ದರೂ, ಸೆಸ್ ಹೆಚ್ಚಳದಿಂದ 11 ಸಾವಿರ ಕೋಟಿ ರು. ಬರಲಿದೆ. ಇನ್ನುಳಿದ ಹಣ ಎಲ್ಲಿಂದ ಬರುತ್ತದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ಸಂಸ್ಥೆಯ ತಜ್ಞರೊಬ್ಬರು ಸಂಶೋಧನಾ ವರದಿಯಲ್ಲಿ ಪ್ರಶ್ನಿಸಿದ್ದಾರೆ.

click me!