
ಬೆಂಗಳೂರು(ಅ.24): ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಕನ್ನಡ ಚಿತ್ರ ನಿರ್ಮಾಪಕರು ಹಾಗೂ ಸಿನಿಮಾಗಳ ಪರ ದನಿಯತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳಿಗೆ ತಡೆ ಹಾಕಬೇಕು. ನಿರ್ಮಾಪಕರು ಉಳಿದರೆ ಕನ್ನಡ ಚಿತ್ರರಂಗ ಉಳಿಯುತ್ತೆ ಎಂದು ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಕನ್ನಡ ಚಲನಚಿತ್ರ ಈಗ ತುಂಬಾನೇ ಬದಲಾಗಿದೆ. ಪ್ರತಿ ಹಂತದಲ್ಲಿ ನಿರ್ಮಾಪಕರು ಕಷ್ಟ ಅನುಭವಿಸುತ್ತಿದ್ದಾರೆ. ಯುಎಫ್ಒ ಹಾಗೂ ಕ್ಯೂಬ್ ಕಂಪನಿಗೆ ಹಣ ಕಟ್ಟಲು ಆಗುತ್ತಿಲ್ಲ. ಫಿಲ್ಮ್ ಛೇಂಬರ್ ಜೊತೆ ಮಾತನಾಡಿ ಸಾಕಷ್ಟು ವಿಚಾರ ಗೊತ್ತಾಗಿದೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತದೆ. ರಾಜ್ಯದಲ್ಲಿ ಒಟ್ಟು ವರ್ಷಕ್ಕೆ ಸುಮಾರು 700 ಸಿನಿಮಾಗಳು ಬಿಡುಗಡೆಯಾದರೆ ಅದರಲ್ಲಿ 400 ಪರಭಾಷೆಯ ಸಿನಿಮಾಗಳಾಗಿರುತ್ತವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದ ಚಿತ್ರಗಳಿಗೆ ಮಲ್ಟಿಫ್ಲೆಕ್ಸ್ ನಲ್ಲಿ ಕೊನೆಯ ಸ್ಥಾನ ಇದೆ. ಈ ಹಿಂದೆ ಕೇವಲ 24 ಟಾಕೀಸ್'ನಲ್ಲಿ ಅನ್ಯಚಿತ್ರ ಬಿಡುಗಡೆಯಾಗುತ್ತಿತ್ತು. ಕನ್ನಡ ಚಿತ್ರರಂಗ ಉಳಿಯಬೇಕಾದರೆ ಕೂಡಲೇ ಪರಭಾಷಾ ಚಿತ್ರಗಳ ಮೇಲೆ ನಿಯಂತ್ರಣ ಅಗತ್ಯ. ಸಿನಿಮಾ ಹೋರಾಟಕ್ಕೆ ನಾನು ಎಂದಿಗೂ ಜೊತೆಗೆ ಇರುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತೇನೆ' ಎಂದರು.
ಕನ್ನಡ ಚಿತ್ರರಂಗದಲ್ಲಿ ಈಗ ತುಂಬಾನೇ ಸಮಸ್ಯೆ ಇದೆ. ಸಮಸ್ಯೆಗಳ ಬಗ್ಗೆ ನನಗೆ ಮನವರಿಕೆಯಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಳ್ಳಬೇಕು. ಫಿಲ್ಮ್ ಛೇಂಬರ್ ಹೋರಾಟಕ್ಕೆ ನನ್ನ ಬೆಂಬಲ ಇದೆ. ಕಾನೂನು ರೀತಿ ಹೋರಾಟಕ್ಕೆ ನನ್ನ ಸಹಮತ ಇದೆ. ಕಳೆದ 12 ವರ್ಷದ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದೆ. ಆಗಿನ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ವ್ಯತ್ಯಾಸವಿದೆ. ನಿರ್ಮಾಪಕರು, ವಿತರಕರು ಸೇರಿದಂತೆ ಎಲ್ಲರ ಸಮಸ್ಯೆ ಎದರಿಸುತ್ತಿದ್ದಾರೆ. ಚಿತ್ರರಂಗದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕೆಲ ನಿರ್ಮಾಪಕರು ಪ್ರೀತಿಯಿಂದ ಹೇಳಿದ್ದಾರೆ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.