ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೊದಲ ದಿನ ಮಾಡುವ ಮೊದಲ ಕೆಲಸ ಏನು ಗೊತ್ತೆ ?

Published : Dec 15, 2017, 10:02 PM ISTUpdated : Apr 11, 2018, 01:12 PM IST
ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೊದಲ ದಿನ ಮಾಡುವ ಮೊದಲ ಕೆಲಸ ಏನು ಗೊತ್ತೆ ?

ಸಾರಾಂಶ

ನಾನು ಟೈಂ ಮೆಂಟೇನ್ ಮಾಡುವುದಿಲ್ಲ ಎಂಬ ಆರೋಪ ಇದೆ. ಒಪ್ಪುತ್ತೇನೆ, ಆದರೆ ಯಾರನ್ನೂ ನೋಯಿಸಲು ನನ್ನಿಂದಾಗದು. ಹಾಗಾಗಿ ನನ್ನ ಟೈಂ ಸೆನ್ಸ್ ಬಗ್ಗೆ ಅಪವಾದವಿದೆ. ಕರ್ನಾಟಕದ ಬಗ್ಗೆ ನಾನೊಂದು ಕನಸು ಕಂಡಿದ್ದೇನೆ

ಬೆಂಗಳೂರು(ಡಿ.15): ಸುವರ್ಣ ನ್ಯೂಸ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ 'ಜೆಡಿಎಸ್​  ಅಧಿಕಾರಕ್ಕೆ ಬಂದರೆ ನಂತರದ  24 ಗಂಟೆಯಲ್ಲೇ ರೈತರ 50 ಸಾವಿರ ಕೋಟಿ ಸಾಲ ಮನ್ನಾ ಮಾಡುವುದು ಶತಸಿದ್ಧ.

ಸುಳ್ಳು ಹೇಳುತ್ತಿಲ್ಲ, ಭರವಸೆ ನೀಡುತ್ತಿಲ್ಲ, ಮಾಡಿ ತೋರಿಸುತ್ತೇನೆ. ಮನಸ್ಸಿದ್ದರೆ ಮಾರ್ಗವಿದೆ. ರೈತರಿಗಾಗಿ ಆ ಮಾರ್ಗ ಅನುಸರಿಸುವೆ. ನಾನು ಟೈಂ ಮೆಂಟೇನ್ ಮಾಡುವುದಿಲ್ಲ ಎಂಬ ಆರೋಪ ಇದೆ. ಒಪ್ಪುತ್ತೇನೆ, ಆದರೆ ಯಾರನ್ನೂ ನೋಯಿಸಲು ನನ್ನಿಂದಾಗದು. ಹಾಗಾಗಿ ನನ್ನ ಟೈಂ ಸೆನ್ಸ್ ಬಗ್ಗೆ ಅಪವಾದವಿದೆ. ಕರ್ನಾಟಕದ ಬಗ್ಗೆ ನಾನೊಂದು ಕನಸು ಕಂಡಿದ್ದೇನೆ. ಅತಂತ್ರ ವಿಧಾನಸಭೆಯಾದರೆ ನನ್ನ ಕನಸಿನ ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ. ಮತ್ತೊಬ್ಬರ ಬಳಿ ಗೋಗರೆಯುವ ಅವಕಾಶ ಕೊಡಬೇಡಿ. 113 ಮ್ಯಾಜಿಕ್ ನಂಬರ್ ಕೊಡಿ, ದೇಶವೇ ತಿರುಗಿ ನೋಡುವಂತೆ ಮಾಡುತ್ತೇನೆ' ಎಂದು ಮನವಿ ಹೇಳಿದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!