
ಬೆಂಗಳೂರು(ಜ.24): ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗಿಂತ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪನವರೇ ಸ್ಟ್ರಾಂಗ್ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ಪಕ್ಷ ನಿಷ್ಠೆ ಪ್ರಶ್ನಾತೀತವಾದುದು. ಅವರು ನನ್ನನ್ನಾಗಲೀ ಪಕ್ಷದ ಇನ್ನಾರನ್ನಾಗಲೀ ಸಂಪರ್ಕ ಮಾಡಿಲ್ಲ. ಬಿಜೆಪಿ ಮುಖಂಡ ಅಯನೂರು ಮಂಜುನಾಥ ಮಾತ್ರ ಜೆಡಿಎಸ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈಶ್ವರಪ್ಪನವರೊಂದಿಗೆ ನಾನೂ ಕೆಲಸ ಮಾಡಿದ್ದೇನೆ. ಕಲಬುರಗಿ ಸಮಾವೇಶದ ವರದಿಗಳನ್ನು ನೋಡಿದರೆ ಈಶ್ವರಪ್ಪನ ವರೇ ಪಕ್ಷದಲ್ಲಿ ಬಲಿಷ್ಠರಾಗಿರುವಂತೆ ತೋರುತ್ತಿದೆ. ಈಶ್ವರಪ್ಪನವರನ್ನು ಮುಗಿಸುವುದೇ ಯಡಿಯೂರಪ್ಪನವರ ಅಜೆಂಡಾ ಇದ್ದಂತಿದೆ.
ಈಶ್ವರಪ್ಪ ಜೆಡಿಎಸ್‌ಗೆ ಬರುತ್ತಾರೆಂದು ಬಿಜೆಪಿ ಯಿಂದಲೇ ಅಪಪ್ರಚಾರ ಆಗುತ್ತಿರುವಂತಿದೆ ಎಂದರು. 2005ರಲ್ಲಿ ಯಡಿಯೂರಪ್ಪ ನನ್ನ ಬಳಿ ಬಂದು ‘ಬಿಜೆಪಿ ಬಿಡುತ್ತೇನೆ. ಅನಂತಕುಮಾರ್‌ರ ಸಾಲ ವಾಪಸ್ ಮಾಡಲು ಏನಾದರೂ ವ್ಯವಸ್ಥೆ ಮಾಡಿಸಿ. ನನ್ನನ್ನು ಮಂತ್ರಿ ಮಾಡಿ' ಎಂದು ಕೋರಿದ್ದರು. ಅವರ ಪರವಾಗಿ ಬಳಿಕ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ರಾಮಚಂದ್ರಗೌಡರೂ ಬಂದಿದ್ದರು. ಆದರೆ ನಾನು ಅವರಿಗೆ ಆಗ ದಾರಿ ತಪ್ಪಿಸದೇ ಇದ್ದುದಕ್ಕೆ ಈಗ ಅನುಭವಿಸುತ್ತಿದ್ದೇನೆ. ಬಳಿಕ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.