
ಬೆಂಗಳೂರು(ಜು.10): ಜೆಡಿಎಸ್ ಪಕ್ಷದಲ್ಲಿ ತಳಮಳ ಹುಟ್ಟಿಸಿದ್ದ ಪ್ರಜ್ವಲ್ ರೇವಣ್ಣ ಅವರ ಸೂಟ್'ಕೇಸ್ ಬಾಂಬ್'ಗೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಸೂಟ್ ಕೇಸ್ ಪಡೆಯುತ್ತಿದ್ದದ್ದು ನಿಜ. ಸೂಟ್ಕೇಸ್ ಕೊಟ್ಟವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದ್ದು ನಿಜ' ಎಂದು ಪ್ರಜ್ವಲ್ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಾ ಬಂಡಾಯ ಶಾಸಕರಿಗೆ ಟಾಂಗ್ ನೀಡಿದರು. ಆದರೆ ಈಗ ಸೂಟ್'ಕೇಸ್ ಕೊಟ್ಟವರೆಲ್ಲಾ ಈಗಾಗಲೇ ಪಕ್ಷ ಬಿಟ್ಟು ಹೊರಗಡೆ ಹೋಗಿದ್ದಾರೆ. ಬಂಡಾಯ ಶಾಸಕರ ಕುರಿತು ಪ್ರಜ್ವಲ್ ಸೂಟ್ಕೇಸ್ ಹೇಳಿಕೆ ನೀಡಿರಬಹುದು. ನನ್ನನ್ನ ಕ್ಷಮೆ ಕೇಳೋದಕ್ಕೆ ಅವನೇನು ತಪ್ಪು ಮಾಡಿಲ್ಲ. ಈ ಹೇಳಿಕೆಯಲ್ಲಿ ನನ್ನನ್ನು ಕುರಿತು ಪ್ರಜ್ವಲ್ ಮಾತನಾಡಿಲ್ಲ' ಎಂದು ತಿಳಿಸಿದರು.
ಎರಡು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ' ನಮ್ಮ ಪಕ್ಷದಲ್ಲಿ ರೋಗವಿದ್ದು, ನಿಷ್ಠೆಯಿಂದ ಕೆಲಸ ಮಾಡುವವರನ್ನ ಹಿಂಬದಿ ಸೀಟಿನಲ್ಲಿ ಕೂರಿಸುತ್ತೇವೆ. ಸೂಟ್ ಕೇಸ್ ಕೊಟ್ಟವರನ್ನ ಮುಂದೆ ಕೂರಿಸುತ್ತೇವೆ. ಕೆಲವು ನಾಯಕರು ಇದ್ದಾರೆ. ಎರಡು ಪಕ್ಷಗಳಲ್ಲಿ ಕಾಲು ಇಟ್ಟುಕೊಂಡಿದ್ದಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ' ಎಂದು ಅಸಮಾಧಾನ ಹೊರ ಹಾಕಿದ್ದರು.
ಈ ಘಟನೆಯ ನಂತರ ಪ್ರಜ್ವಲ್ ರೇವಣ್ಣ ಸ್ವತಃ ತಾತಾ ದೇವೇಗೌಡರ ಕ್ಷಮೆಯಾಚಿಸಿದ್ದರು. ಹೆಚ್.ಡಿ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಹೆಚ್ಚು ಮಹತ್ವ ನೀಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.