
ಬೆಂಗಳೂರು(ಮಾ.02): ಕಳೆದ ಮೂರುವರೆ ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರ? ಬಿಜೆಪಿಯನ್ನು ಚರ್ಚೆಗೆ ಬನ್ನಿ ಎನ್ನುವ ನೀವು ತಾಕತ್ ಇದ್ದರೆ ನನ್ನೊಂದಿಗೆ ಓಪನ್ ಡಿಬೇಟ್'ಗೆ ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ನಾನು ಇಸ್ರೇಲ್'ಗೆ ಹೋಗಿ ಕೃಷಿ ಅಧ್ಯಯನ ಮಾಡಿದ್ದನ್ನು ಲಘುವಾಗಿ ಮಾತಾಡುತ್ತೀರಾ..? ನೀವು ಏನೇನು ಮಾಡಿದ್ದೀರಾ ಎನ್ನುವುದನ್ನು ಜನರ ಮುಂದೆ ಇಡ್ತೀನಿ. ನನ್ನ ಬಗ್ಗೆ ಹಾಗೂ ಜೆಡಿಎಸ್ ಬಗ್ಗೆ ಮುಖ್ಯಮಂತ್ರಿಗಳು ಉಢಾಪೆ ಮಾತುಗಳಿಗೆ ಮುಂದಿನ ದಿನಗಳಲ್ಲಿ ಜನರು ಉತ್ತರ ಕೊಡುತ್ತಾರೆ.
ಕರ್ನಾಟಕ ಸೋಲಾರ್ ವಿದ್ಯುತ್ಚಕ್ತಿ ಉತ್ಫಾದನೆ ಮಾಡುತ್ತಿರುವುದು ಪ್ರಪಂಚದ ಎಂಟನೇ ಅದ್ಭುತ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿಎಂ ಹೇಳಿಕೆ ಕೇಳಿ ಆಶ್ಚರ್ಯವಾಗ್ತಿದೆ. ಸೋಲಾರ್ ಶಕ್ತಿಯನ್ನು ಈಗಾಗಲೇ ಹಲವಾರು ದೇಶಗಳು ಸಾವಿರಾರು ಮೆಗವ್ಯಾಟ್ ಉತ್ಫಾದನೆ ಮಾಡುತ್ತಿವೆ. ಈ ಪ್ರಪಂಚದಲ್ಲಿ ಮೊದಲನೇ ಬಾರಿಗೆ ಇವರು ಸೋಲಾರ್ ವಿದ್ಯುತ್ ಉತ್ಫಾದನೆ ಮಾಡಿದ್ದಾರಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.