ತಹಶೀಲ್ದಾರ್‌ ಪರೀಕ್ಷೆ ಬರೆಯಲು ಕತ್ತೆಗೆ ಹಾಲ್‌ ಟಿಕೆಟ್‌ ಕೊಟ್ಟರು!

Published : Apr 28, 2018, 08:07 AM IST
ತಹಶೀಲ್ದಾರ್‌ ಪರೀಕ್ಷೆ ಬರೆಯಲು  ಕತ್ತೆಗೆ ಹಾಲ್‌ ಟಿಕೆಟ್‌ ಕೊಟ್ಟರು!

ಸಾರಾಂಶ

ಲಸಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್‌ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್‌ ಟಿಕೆಟ್‌ ನೀಡಲಾಗಿದೆ. 

ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್‌ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್‌ ಟಿಕೆಟ್‌ ನೀಡಲಾಗಿದೆ.

ಹೌದು, ನಂಬಲಸಾಧ್ಯವಾದರೂ ಸತ್ಯ. ಕುಚೇಷ್ಟೆಯ ಪರಮಾವಧಿ ಎಂಬಂತೆ ಜಮ್ಮು- ಕಾಶ್ಮೀರ ಸೇವಾ ಆಯ್ಕೆ ಮಂಡಳಿ ಕಚುರ್‌ ಖಾರ್‌ (ಕಂದು ಕತ್ತೆ)ಯ ಹೆಸರಿನಲ್ಲಿ ಪ್ರವೇಶ ಪತ್ರ ಹೊರಡಿಸಿದೆ.

ಕತ್ತೆಯ ಫೋಟೋ ಇರುವ ಹಾಲ್‌ ಟಿಕೆಟ್‌ ಇದೀಗ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿದೆ. ಅಂದಹಾಗೆ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷದ ಹಿಂದೆ ಹಸುವೊಂದಕ್ಕೆ ಹಾಲ್‌ ಟಿಕೆಟ್‌ ನೀಡಿ ಜಮ್ಮು ಕಾಶ್ಮೀರ ಆಡಳಿತ ನಗೆಪಾಟಲಿಗೀಡಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Pakistan Satellites Monitoring India: ಭಾರತದ ಮೇಲೆ ನಿಗಾ ಇಡಲು ಪಾಕ್‌ನಿಂದ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ!
₹100 Is Just a Number : ರೂಪಾಯಿ ಮೌಲ್ಯ 100 ಡಾಲರ್‌ಗೆ ಕುಸಿದರೂ ಆತಂಕವಿಲ್ಲ!