
ಮುಂಬೈ ದಾಳಿಯ ರುವಾರಿ ಉಗ್ರ ಹಫೀಜ್ ಸಯ್ಯದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಗೆ ಈಗ ಹೊಸ ಹೆಸರು ನಾಮಕರಣಗೊಂಡಿದೆ. ಕಾಶ್ಮೀರ ಸ್ವಾತಂತ್ರ್ಯ ಚಳವಳಿಗಾಗಿ ನೂತನ ಹೆಸರಿಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಈತ ಮುಖ್ಯಸ್ಥನಾಗಿರುವ ಜಮಾತ್-ಉದ್-ದವಾ ಹಾಗೂ ಸಯೀದ್ ಫಲಾಹ್-ಎ-ಇನ್'ಸಾನಿಯತ್ ಫೌಂಡೇಶನ್ ಸಂಸ್ಥೆಗಳಿಗೆ ತಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರಿ(ಟಿಎಜೆಕೆ) ಎಂದು ಕೆಲ ದಿನಗಳ ಹಿಂದೆಯಷ್ಟೆ ಮರು ನಾಮಕರಣವಾಗಿದೆ ಎಂದು ಡೈಲಿ ಎಕ್ಸ್'ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಕೆಲ ದಿನಗಳ ಹಿಂದಷ್ಟೆ ಹಫೀಜ್ ಸಯ್ಯದ್'ನನ್ನು ಪಾಕ್'ನ ಲಾಹೋರ್'ನಲ್ಲಿ ಗೃಹಬಂಧನಕ್ಕಿಡಲಾಗಿತ್ತು.
ಹಫೀಜ್ ಬಂಧನದ ನಂತರ ಜಮಾತ್-ಉದ್-ದವಾ ಹಾಗೂ ಸಯೀದ್ ಫಲಾಹ್-ಎ-ಇನ್'ಸಾನಿಯತ್ ಫೌಂಡೇಶನ್ ಕೇಂದ್ರಗಳು ಸ್ಥಗಿತಗೊಂಡಿದ್ದವು. ಈಗ ಕಾಶ್ಮೀರ ಸ್ವಾತಂತ್ರಕ್ಕಾಗಿ ಇಸ್ಲಾಮಾಬಾದ್'ನಲ್ಲಿ ಮತ್ತೆ ಟಿಎಜೆಕೆ ಹೆಸರಿನಲ್ಲಿ ಪುನಾರಂಭವಾಗಿವೆ. 2008ರ ಮುಂಬೈನಲ್ಲಿ ಈತನ ಸಂಘಟನೆ ಜಮಾತ್-ಉದ್-ದವಾ ದಾಳಿ ನಡೆಸಿದ ಪರಿಣಾಮ 160 ಮಂದಿ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.