ಶಾಂಕಿಂಗ್ ನ್ಯೂಸ್: 3 ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕಳವು

By Web DeskFirst Published Oct 13, 2018, 10:07 AM IST
Highlights

ತಂತ್ರಜ್ಞಾನ ಬೆಳೆದಂತೆ ಹ್ಯಾಕರ್‌ಗಳ ಉಪಟಳ ದಿನಗಳದಂತೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ನಡೆದ ದಾಳಿಗೆ ಪೇಸ್‌ಬುಕ್ ಸ್ಪಷ್ಟನೆ ನೀಡಿದೆ.

ನ್ಯೂಯಾರ್ಕ್, [ಅ.13]: ಇತ್ತೀಚೆಗಿನ ದಿನಗಳಲ್ಲಿ ಹ್ಯಾಕರ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಹ್ಯಾಕರ್‌ಗಳ ದಾಳಿ ವೇಳೆ 2.9 ಕೋಟಿ ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್‌ಬುಕ್‌ ಖಚಿತಪಡಿಸಿದೆ. 

ಈ 2.9 ಕೋಟಿ ಫೇಸ್‌ಬುಕ್‌ ಬಳಕೆದಾರರ ಪೈಕಿ, 1.5 ಕೋಟಿ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಲಭ್ಯವಾಗುವ ಮೊಬೈಲ್‌ ಸಂಖ್ಯೆ, ಇ-ಮೇಲ್‌ ಅಥವಾ ಎರಡೂ ಮತ್ತು ಹೆಸರುಗಳನ್ನು ಹ್ಯಾಕರ್‌ಗಳು ಪಡೆದಿದ್ದಾರೆ. 

ಅಲ್ಲದೆ, ಉಳಿದ 1.4 ಕೋಟಿ ಮಂದಿಯ ಯೂಸರ್‌ನೇಮ್‌(ಬಳಕೆದಾರರ ಹೆಸರು), ಲಿಂಗ, ಭಾಷೆ, ಧರ್ಮ, ಹುಟ್ಟೂರು, ವಾಸವಾಗಿರುವ ಸ್ಥಳ, ಜನ್ಮ ದಿನಾಂಕ, ಫೇಸ್‌ಬುಕ್‌ ಬಳಕೆಗೆ ಬಳಸುವ ಮೊಬೈಲ್‌, ಶಿಕ್ಷಣ, ಕೆಲಸ ಹಾಗೂ ಅವರು ಶೋಧ ನಡೆಸಿದ 10 ಪ್ರದೇಶಗಳ ಬಗ್ಗೆ ವಿವರವನ್ನು ಹ್ಯಾಕರ್‌ಗಳು ತಮ್ಮದಾಗಿಸಿಕೊಂಡಿದ್ದಾರೆ ಎಂದು ಫೇಸ್‌ಬುಕ್‌ ಹೇಳಿದೆ. 

ಫೇಸ್‌ಬುಕ್‌ನ 5 ಕೋಟಿ ಬಳಕೆದಾರರ ಖಾತೆಗಳನ್ನು ಪ್ರವೇಶಿಸಲು ಅವಕಾಶ ಕಲ್ಪಿಸುವ ಡಿಜಿಟಲ್‌ ಲಾಗಿನ್‌ ಕೋಡ್‌ಗಳನ್ನು ಹ್ಯಾಕರ್‌ಗಳು ದೋಚಿದ್ದಾರೆ ಎಂದು ಸೆಪ್ಟೆಂಬರ್‌ ಕೊನೇ ವಾರದಲ್ಲಿ ಫೇಸ್‌ಬುಕ್‌ ಹೇಳಿತ್ತು.

click me!