ಆಧಾರ್ ಕೊಟ್ನೋಡಿ..ಜಾತಕ ಬಿಚ್ಚಿಡ್ತಿನಿ.. ಮೋದಿಗೆ ಹ್ಯಾಕರ್ ಸವಾಲ್!

Published : Jul 29, 2018, 09:35 PM ISTUpdated : Jul 30, 2018, 12:16 PM IST
ಆಧಾರ್ ಕೊಟ್ನೋಡಿ..ಜಾತಕ ಬಿಚ್ಚಿಡ್ತಿನಿ.. ಮೋದಿಗೆ ಹ್ಯಾಕರ್ ಸವಾಲ್!

ಸಾರಾಂಶ

ಆಧಾರ್  ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಬೇಕು ಎಂದು ಕೇಂದ್ರ ಸರಕಾರ ಒಂದು ಕಡೆ ಹಠಕ್ಕೆ ಬಿದ್ದಿದ್ದರೆ ಇದೇ ಆಧಾರ್ ವಿಚಾರ ಇಟ್ಟುಕೊಂಡು ಪುಣ್ಯಾತ್ಮನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾನೆ.  ಸುಮ್ಮನೆ ಏನು ಸವಾಲು ಹಾಕಿಲ್ಲ.. ಏನಿದು ಕತೆ?

ನವದೆಹಲಿ[ಜು.29]  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಆಧಾರ್​ ಹ್ಯಾಕ್​ ಮಾಡಿದ್ದ ಫ್ರೆಂಚ್​ ಹ್ಯಾಕರ್​ ಇದೀಗ ಪ್ರಧಾನಿ ಮೋದಿಗೂ ಚಾಲೆಂಜ್​ ಮಾಡಿದ್ದು,  ಧೈರ್ಯವಿದ್ದರೆ ನಿಮ್ಮ ಆಧಾರ್​ ಸಂಖ್ಯೆನ್ನು ಬಹಿರಂಗ ಪಡಿಸುವಂತೆ ಸವಾಲೆಸೆದಿದ್ದಾನೆ.

ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ತಮ್ಮ ಆಧಾರ್​ ಹ್ಯಾಕ್​ ಮಾಡುವಂತೆ ಹೇಳಿ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್​ನಲ್ಲು ಪೋಸ್ಟ್​ ಮಾಡಿಕೊಂಡಿದ್ದರು. ಕೆಲವೇ ಕ್ಷಣಗಳಲ್ಲಿ ಫ್ರೆಂಚ್​ ಭದ್ರತಾ ತಜ್ಞ ಎಲೈಟ್​ ಆ್ಯಂಡ್ರಸನ್​, ಶರ್ಮಾ ಖಾತೆಯನ್ನು ಹ್ಯಾಕ್​ ಮಾಡಿ ಅವರ ಪಾನ್​ ನಂಬರ್​, ಫೋನ್​ ನಂಬರ್​, ಇಮೇಲ್​ ಐಡಿ, ಖಾಸಗಿ ಮೊಬೈಲ್​ ನಂಬರ್​, ವಾಟ್ಸಪ್​ ಪ್ರೊಫೈಲ್​ ಚಿತ್ರ ಎಲ್ಲವನ್ನೂ ಬಹಿರಂಗ ಮಾಡಿದ್ದ. ಇದಾದ ಮೇಲೆ ಶರ್ಮಾ ಟ್ರೋಲ್ ಗೂ ಗುರಿಯಾಗಿದ್ದರು.

ಕಾರ್ಯಕರ್ತರು ಮೈಮರೆತರೆ ವಾಜಪೇಯಿಗೆ ಆದ ಗತಿ ಮೋದಿಗೂ ಬರಲಿದೆ

ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿರುವ ಹ್ಯಾಕರ್ ನಿಮ್ಮ ಆಧಾರ್ ಸಂಖ್ಯೆ ಬಹಿರಂಗ ಮಾಡಿ. ಎಲ್ಲ ವಿವರಗಳನ್ನು ಚಿಚ್ಚಿಡುತ್ತೇನೆ ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಗೆ ಪರ ವಿರೋಧದ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ