
ನವದೆಹಲಿ(ಮೇ.19): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಿಎಸ್‌ಟಿ ಜಾರಿಗೆ ಬಂದ ಬಳಿಕ ದೈನಂದಿನ ಬಳಕೆಯ ಸರಕುಗಳಲ್ಲಿ ಕೆಲವೊಂದು ಅಗ್ಗ ಹಾಗೂ ಕೆಲವೊಂದು ದುಬಾರಿಯಾಗಲಿವೆ. ಯಾವುದು ಅಗ್ಗ? ಯಾವುದು ದುಬಾರಿಯಾಗಲಿದೆ ಅಂತೀರಾ? ಇಲ್ಲಿದೆ ವಿವರ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸರಕು ಮತ್ತು ಸೇವಾ ತೆರಿಗೆ ಮಸೂದೆ ಜುಲೈ ಒಂದರಿಂದ ಜಾರಿಗೆ ಬರಲಿದೆ. ಮಸೂದೆ ಜಾರಿಯಾದ ಬಳಿಕ ಆಹಾರ ಪದಾರ್ಥಗಳು, ಧಾನ್ಯಗಳು ಹಾಗೂ ಹಾಲು ಅಗ್ಗವಾಗಲಿದೆ. ದೈನಂದಿನ ಬಳಕೆಯ ಸರಕುಗಳಾದ ಪದಾರ್ಥಗಳು, ಧಾನ್ಯಗಳು ಹಾಗೂ ಹಾಲನ್ನು ಜಿಎಸ್ ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶ್ರೀನಗರದಲ್ಲಿ ನಡೆದ ಜಿಎಸ್'ಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾವುದು ಅಗ್ಗ, ಯಾವುದು ದುಬಾರಿ?
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಿಎಸ್‌ಟಿ ಬಿಲ್ ಜುಲೈ ಒಂದರಿಂದ ಜಾರಿಗೆ ಬರಲಿದೆ. ಆದರೆ ಜಿಎಸ್ ಟಿ ವ್ಯಾಪ್ತಿಯಿಂದ ಅಕ್ಕಿ, ಗೋದಿ, ಹಾಲು ಮೊಸರನ್ನು ಹೊರಗಿಡಲು ನಿರ್ಧರಿಸಲಾಗಿದೆ. ಹೀಗಾಗಿ ಇವುಗಳ ಬೆಲೆ ಇಳಿಕೆಯಾಗಲಿದೆ. ಇವುಗಳ ಮೇಲೆ ಪ್ರಸ್ತುತ ಕೆಲವು ರಾಜ್ಯಗಳಲ್ಲಿ ವ್ಯಾಟ್ ಜಾರಿಯಲ್ಲಿದೆ.
ಆದರೆ ಜಿಎಸ್ ಟಿ ಬಿಲ್ ಜಾರಿ ಬಳಿಕ ಕಾರು, ಎಸಿ, ರೆಫ್ರಿಜರೇಟರ್, ತಂಪುಪಾನಿಯ ದುಬಾರಿಯಾಗಲಿದೆ. ಕಾರಣ ಇವುಗಳು ಶೇಕಡಾ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಇನ್ನೂ ಸ ಾಮಾನ್ಯ ಬಳಕೆಯ ಉತ್ಪನ್ನಗಳಾದ ಕೇಶ ತೈಲ, ಸೋಪು, ಟೂಥ್ ಪೆಸ್ಟ್‌ಗಳು ಶೇಕಡಾ 18ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಪ್ರಸ್ತುತ ರಾಜ್ಯಹಾಗೂ ಕೇಂದ್ರದ ತೆರಿಗೆಗಳು ಸೇರಿ 22 ರಿಂದ 24ರಷ್ಟು ತೆರಿಗೆ ಇಂಥ ಸರಕುಗಳಿಗೆ ಅನ್ವಯವಾಗುತ್ತಿದೆ. ಹೀಗಾಗಿ ಇವುಗಳ ಬೆಲೆಯೂ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಲಿದೆ.
ದಿನ ಬಳಕೆಯ ವಸ್ತುಗಳಾದ ಸಕ್ಕರೆ, ಚಹಾ, ಕಾಫಿ, ಅಡುಗೆ ತೈಲ ಮುಂತಾದ ಸರಕುಗಳಿಗೂ ಅತ್ಯಂತ ಕಡಿಮೆ ಶೇ. 5ರಷ್ಟು ತೆರಿಗೆ ಅನ್ವಯವಾಗಲಿದೆ. ಒಟ್ಟಿನಲ್ಲಿ ಮೊದಲ ದಿನ ನಡೆದ ಸಭೆಯಲ್ಲಿ ಬಹುತೇಕ ಸರಕುಗಳ ತೆರಿಗೆ ಪ್ರಮಾಣವನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಸರಕುಗಳಿಗೂ ಜಿಎಸ್ ಟಿ ಅನ್ವಯವಾಗಲಿದ್ದು, ಚಿನ್ನ, ಚಪ್ಪಲಿ ಸೇರಿ 6 ಉತ್ಪನ್ನಗಳ ತೆರಿಗೆ ಪ್ರಮಾಣ ಇಂದು ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.