
ಕೆನಡಾ[ಏ.04]: ಕೆನಡಾದ ದಂಪತಿಯೊಂದು ತಿಂಗಳಾನುಗಟ್ಟಲೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದಿದ್ದ ಪುಸ್ತಕದ ಪುಟದೊಳಗೆ ಅಡಗಿದ್ದ ಲಾಟರಿ ಟಿಕೆಟ್ ನಿಂದ 10 ಲಕ್ಷ ಕೆನಡಾ ಡಾಲರ್ ಗೆದ್ದಿದ್ದಾರೆ. ಲೋಟೋ ಕ್ಯೂಬೆಕ್ ಸಂಘಟನೆಯು ಏಪ್ರಿಲ್ 3 ರಂದು ಈ ಜೋಡಿ 7.5 ಲಕ್ಷ ಅಮೆರಿಕನ್ ಡಾಲರ್[ಸುಮಾರು 5ಕೋಟಿ 16 ಲಕ್ಷ ರೂಪಾಯಿ] ಗೆದ್ದಿರುವುದಾಗಿ ಘೋಷಿಸಿದೆ.
ನಿಕೋಲ್ ಪೆಡ್ನಾಲ್ಟ್ ಹಾಗೂ ರಾಜರ್ ಲಾರೋಕ್ ರಿಗೆ ತಮ್ಮ ಬಳಿ 2018ರ ಏಪ್ರಿಲ್ 5ರ ಲಾಟರಿ ಟಿಕೆಟ್ ಇದೆ ಎಂಬ ವಿಚಾರ ಕಳೆದ ವಾರಾಂತ್ಯದಲ್ಲಿ ಬೆಳಕಿಗೆ ಬಂದಿತ್ತು.
ಪೆಡ್ನಾಲ್ಟ್ ತನ್ನ ಮೊಮ್ಮಗನಿಗೆ ಹೊಂ ವರ್ಕ್ ಮಾಡಲು ಸಹಾಯ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಈ ಲಾಟರಿ ಟಿಕೆಟ್ ಅವರ ಕೈ ಸೇರಿತ್ತು. ಈ ಟಿಕೆಟ್ ಅವರು 2018ರ ವ್ಯಾಲಂಟೈನ್ಸ್ ಡೇಯಂದು ಖರೀದಿಸಿದ್ದರು. ತಮ್ಮ ಮೊಮ್ಮಗ ಹೋಂ ವರ್ಕ್ ಮಾಡಲು ಸಹಾಯ ಮಾಡಿರದಿದ್ದರೆ ಈ ಲಾಟರಿ ಟಿಕೆಟ್ ತಮಗೆ ಸಿಗುತ್ತಿರಲಿಲ್ಲ ಎನ್ನುವುದು ಪೆಡ್ನಾಲ್ಟ್ ಮಾತಾಗಿದೆ.
ಲಾಟರಿ ಟಿಕೆಟ್ ವಿಚಾರದಲ್ಲಿ ಈ ದಂಪತಿ ಬಹಳ ಲಕ್ಕಿ. ಒಂದಡೆ ಇದರಿಂದ 5 ಕೋಟಿ ಅವರ ಕೈ ಸೇರಿದರೆ ಮತ್ತೊಂದೆಡೆ ಈ ಟಿಕೆಟ್ ಅವಧಿ ಮುಕ್ತಾಯಗೊಳ್ಳಲು ಕೆಲವೇ ದಿನಗಳ ಮೊದಲು ಸಿಕ್ಕಿರುವುದು ಅದೃಷ್ಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.