
ನವದೆಹಲಿ: ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ರೀತಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು/ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಮುಂದಾಗಿದೆ.
ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007 ಈಗಾಗಲೇ ಜಾರಿಯಲ್ಲಿದೆ. ಈ ಪ್ರಕಾರ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟು) ಹಾಗೂ ಪಾಲಕರು (ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ) ವೃದ್ಧಾಶ್ರಮಗಳಲ್ಲಿದ್ದರೆ ಅವರಿಗೆ ಅವರ ಮಕ್ಕಳು ಮಾಸಿಕ 10 ಸಾವಿರ ರು. ನೀಡಬೇಕು ಎಂಬ ನಿಯಮವಿದೆ. ಆದರೆ ಇದು ಪಾಲಕರಿಗೆ ಸಾಲುತ್ತಿಲ್ಲ.
ಮೇಲಾಗಿ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ. ಹೀಗಾಗಿ ಮೊತ್ತ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ತರಲಿದ್ದೇವೆ ಎಂದು ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿ ಲತಾ ಕೃಷ್ಣರಾವ್ ಹೇಳಿದ್ದಾರೆ. ಹಣ ಕೊಡದೇ ಹೋದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.