ಸೈಕಲ್ ಖರೀದಿಯಲ್ಲಿ ಭಾರಿ ಅವ್ಯವಹಾರ! ಕಳಪೆ ಗುಣಮಟ್ಟದ ಸೈಕಲ್ ತಯಾರು

By Suvarna Web DeskFirst Published Jan 31, 2017, 3:41 AM IST
Highlights

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಸೈಕಲ್ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಇದೀಗ ಈ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸೈಕಲ್ ಗಳ ಗುಣಮಟ್ಟ ಪರೀಕ್ಷೆ ನಡೆಸದೇ 6,7 ಹಾಗೂ 8 ನೇ ತರಗತಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸೈಕಲ್ ಗಳನ್ನ ವಿತರಿಸಿದ್ದಾರೆ. ನಿಯಮದಲ್ಲಿ 5.10 ಲಕ್ಷ ಸಾಮರ್ಥ್ಯ ಇರುವ ಕಂಪನಿಗಳಿಗೆ ಸೈಕಲ್ ಟೆಂಟರ್'ನ್ನು ನೀಡಬೇಕು.ಆದರೆ ಕಡಿಮೆ ಸೈಕಲ್ ತಯಾರಿಕೆ ಮಾಡುವ ಎಸ್.ಕೆ.ಟೆಕ್ಸೋ ಹಾಗೂ ಹೀರೋ ಇಕೋಟಿಕ್ ಕಂಪನಿಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.  ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆರ್.ಟಿ.ಐ.ಕಾರ್ಯಕರ್ತ ಸಾಯಿ ದತ್ತಾ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ..

ಬೆಂಗಳೂರು(ಜ.31): ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ರಾಜ್ಯ ಸರ್ಕಾರ ಸೈಕಲ್ ಯೋಜನೆಯನ್ನು ಜಾರಿಗೆ ತಂದಿದೆ. ಆದೇ ಸೈಕಲ್ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ಯೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೂಡ ನೀಡಲಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಸೈಕಲ್ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಇದೀಗ ಈ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸೈಕಲ್ ಗಳ ಗುಣಮಟ್ಟ ಪರೀಕ್ಷೆ ನಡೆಸದೇ 6,7 ಹಾಗೂ 8 ನೇ ತರಗತಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸೈಕಲ್ ಗಳನ್ನ ವಿತರಿಸಿದ್ದಾರೆ. ನಿಯಮದಲ್ಲಿ 5.10 ಲಕ್ಷ ಸಾಮರ್ಥ್ಯ ಇರುವ ಕಂಪನಿಗಳಿಗೆ ಸೈಕಲ್ ಟೆಂಟರ್'ನ್ನು ನೀಡಬೇಕು.ಆದರೆ ಕಡಿಮೆ ಸೈಕಲ್ ತಯಾರಿಕೆ ಮಾಡುವ ಎಸ್.ಕೆ.ಟೆಕ್ಸೋ ಹಾಗೂ ಹೀರೋ ಇಕೋಟಿಕ್ ಕಂಪನಿಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.  ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆರ್.ಟಿ.ಐ.ಕಾರ್ಯಕರ್ತ ಸಾಯಿ ದತ್ತಾ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ..

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ವಶಿಕ್ಷಣ ಅಭಿಯಾನ ಆಯುಕ್ತರು,ಸೈಕಲ್ ವಿತರಣೆಯಲ್ಲಿ ಗುಣಮಟ್ಟದ ಪರೀಕ್ಷೆಯನ್ನ ನಡೆಸಿದ್ದೇವೆ. ಕಳಪೆ ಗುಣಮಟ್ಟದ ಸೈಕಲ್ ವಿದ್ಯಾರ್ಥಿಗಳಿಗೆ ವಿತರಿಸಿರುವ ಬಗ್ಗೆ ಇಲಾಖೆಗೆ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೈಕಲ್ ಖರೀದಿಯಲ್ಲಿ ಕ್ಯೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎನನುವ ಆರೋಪ ಕೇಳಿ ಬಂದಿದೆ. ಆದರೆ ಈ ಅಕ್ರಮದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದಷ್ಟೇ ಗೋತ್ತಾಗಬೇಕಿದೆ. ನೂತನ ಲೋಕಾಯುಕ್ತರು ಯಾವ ರೀತಿ ತನಿಖೆ ನಡೆಸ್ತಾರೆ ಎನ್ನುವುದು ಸದ್ಯಕ್ಕೆ ಕಾದು ನೋಡಬೇಕಿದೆ.

click me!