
ಅಮೃತಸರ:(ಡಿ.05): ಅಮೃತಸರದಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ ಶೃಂಗ’ಕ್ಕೆ ಹಾಜರಾಗಿದ್ದ ತಮ್ಮ ಮೇಲೆ ಭಾರತ ಅನೇಕ ನಿರ್ಬಂಧ ಹೇರಿತ್ತು ಎಂಬ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅರೋಪವನ್ನು ಭಾರತ ಅಲ್ಲಗೆಳೆದಿದೆ.
ಸಮ್ಮೇಳನಕ್ಕೆ ಭೇಟಿ ನೀಡಿದ ಅಜೀಜ್‌ರನ್ನು ಸೌಜನ್ಯಶೀಲವಾಗಿ ನಡೆಸಿಕೊಳ್ಳಲಾಗಿತ್ತು. ಅವರ ಆರೋಪ ಸುಳ್ಳು ಎಂದು ಭಾರತದ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಪಾಕ್'ಗೆ ವಾಪಸಾದ ಅಜೀಜ್, ‘‘ಪಾಕ್ ಮಾಧ್ಯಮಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಸುದ್ದಿಗೋಷ್ಠಿಗೆ ಅನುಮತಿ ನೀಡಲಿಲ್ಲ, ಸ್ವರ್ಣಮಂದಿರಕ್ಕೆ ಹೋಗಲೂ ಬಿಡಲಿಲ್ಲ,’’ ಎಂದು ಆರೋಪಿಸಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ಭಾರತ, ‘‘ಅಜೀಜ್'ಗೆ ವಿಶೇಷ ಕೊಠಡಿ, ಶಸ್ತ್ರಸಜ್ಜಿತ ಕಾರು, ವಿಶೇಷ ಭದ್ರತೆ ನೀಡಲಾಗಿತ್ತು,’’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.