ಗೋರಖ್‌ಪುರ ಮದರಸಾದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ

By Suvarna Web DeskFirst Published Apr 11, 2018, 7:35 AM IST
Highlights

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಉರ್ದು ಬಿಟ್ಟು ಬೇರೆ ಭಾಷೆಗಳನ್ನು ಕಲಿಸುವುದು ತೀರಾ ವಿರಳ. ಆದರೆ, ಇದಕ್ಕೆ ಅಪವಾದ ಎಂಬಂತೆ ಉತ್ತರ ಪ್ರದೇಶದ ಗೋರಖ್‌ಪುರದ ದಾರೂಲ್‌ ಉಲೂಮ್‌ ಹುಸೈನಿಯಾ ಮದರಸಾದಲ್ಲಿ ಹಿಂದಿ ಇಂಗ್ಲಿಷ್‌ ಜೊತೆ ಸಂಸ್ಕೃತವನ್ನೂ ಹೇಳಿಕೊಡಲಾಗುತ್ತಿದೆ.

ಇಂಗ್ಲಿಷ್‌, ಹಿಂದಿ, ಗಣಿತ ಮತ್ತು ಅರೇಬಿಕ್‌ ಭಾಷೆಯನ್ನು ಕಲಿಸಲಾಗುತ್ತಿದ್ದು, 5ನೇ ತರಗತಿಯ ವರೆಗೆ ಸಂಸ್ಕೃತವನ್ನೂ ಹೇಳಿಕೊಡಲಾಗುತ್ತದೆ ಎಂದು ಮದರಸಾದ ಪ್ರಿನ್ಸಿಪಾಲ್‌ ಹಫೀಜ್‌ ನಜ್ರೆ ಅಲಾಮ್‌ ಹೇಳಿದ್ದಾರೆ.

ವಿದ್ಯಾರ್ಥಿಗಳು ಖುಷಿಯಿಂದ ಸಂಸ್ಕೃತವನ್ನು ವ್ಯಾಸಂಗ ಮಾಡುತ್ತಿದ್ದು, ಪೋಷಕರು ಕೂಡ ಖುಷಿ ಆಗಿದ್ದಾರೆ. ಮದರಸಾದಲ್ಲಿ ಸಂಸ್ಕೃತ ಕಲಿಸುತ್ತಿರುವುದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ.

click me!