ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ: ಬಿಜೆಪಿ ಅಧ್ಯಕ್ಷರ ಹೇಳಿಕೆ

Published : Nov 03, 2018, 07:48 AM IST
ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ: ಬಿಜೆಪಿ ಅಧ್ಯಕ್ಷರ ಹೇಳಿಕೆ

ಸಾರಾಂಶ

ರಾಜ್ಯ ಬಿಜೆಪಿ ಅಧ್ಯಕ್ಷರು ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿಯೊಂದನ್ನು ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ರಾಮಮಂದಿರ ವಿಚಾರವಾಗಿ ಈ ಸುದ್ದಿ ಇರಲಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ. 

ಲಖನೌ: ಅಯೋಧ್ಯೆ ಕುರಿತ ತೀರ್ಪು ವಿಳಂಬವಾದ ಬೆನ್ನಲ್ಲೇ, ರಾಮನ ಕುರಿತ ಮತ್ತೊಂದು ವಿಷಯವನ್ನು ಬಿಜೆಪಿ ತನ್ನ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

 ಉತ್ತರಪ್ರದೇಶದಲ್ಲಿ ಅಯೋಧ್ಯೆ ಸಮೀಪವೇ ಹರಿಯುವ ಸರಯೂ ನದಿ ದಂಡೆಯಲ್ಲಿ 151 ಮೀಟರ್‌ ಎತ್ತರದ ರಾಮನ ವಿಗ್ರಹವನ್ನು ನಿರ್ಮಾಣ ಮಾಡುವ ಯೋಜನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 4-5 ದಿನಗಳಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ. 336 ಕೋಟಿ ರು.ವೆಚ್ಚದ ಈ ಯೋಜನೆ, ರಾಮಮಂದಿರ ನಿರ್ಮಾಣ ವಿಳಂಬ ವಿಷಯವನ್ನು ಸ್ವಲ್ಪ ಮಟ್ಟಿಗೆ ತಣ್ಣಗೆ ಮಾಡಲಿದೆ ಎನ್ನಲಾಗಿದೆ. 

ಈ ಸುದ್ದಿಗೆ ಪೂರಕವೆಂಬಂತೆ, ದೀಪಾವಳಿ ವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಯೋಧ್ಯೆ ಕುರಿತು ಶುಭ ಸುದ್ದಿ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಹೇಳಿದ್ದಾರೆ. ಆದಿತ್ಯನಾಥ್‌ ಅವರು ಬಹುದೊಡ್ಡ ಸಂತ. ಹೀಗಾಗಿ ಅವರೇ ಶುಭಸುದ್ದಿ ನೀಡಲಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಕಿಕ್ ಮಾಡಿದ ಚೆಂಡಿಗಾಗಿ ಕಿತ್ತಾಡಿದ ಅಭಿಮಾನಿಗಳು: ವೀಡಿಯೋ ಭಾರಿ ವೈರಲ್
ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ