ಬಿಎಂಟಿಸಿ -ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್

First Published Jun 21, 2018, 9:39 AM IST
Highlights

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದ್ದರೂ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಅದರ ಬದಲು ಸಾರಿಗೆ ನಿಗಮಗಳ ವೆಚ್ಚ ಕಡಿತ ಹಾಗೂ ವಾಣಿಜ್ಯ ಮೂಲಗಳಿಂದ ಆದಾಯ ಗಳಿಕೆಗೆ ಆದ್ಯತೆ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ. 

ಬೆಂಗಳೂರು : ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದ್ದರೂ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಅದರ ಬದಲು ಸಾರಿಗೆ ನಿಗಮಗಳ ವೆಚ್ಚ ಕಡಿತ ಹಾಗೂ ವಾಣಿಜ್ಯ ಮೂಲಗಳಿಂದ ಆದಾಯ ಗಳಿಕೆಗೆ ಆದ್ಯತೆ ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ. 

ಬುಧವಾರ ವಿಧಾನಸೌಧದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಂದ ಪ್ರತಿ ವರ್ಷ 500 ಕೋಟಿ ರು.ಗಳಷ್ಟು ನಷ್ಟ ಅನುಭವಿಸಲಾಗುತ್ತಿದೆ. ಇದರಿಂದ ನಷ್ಟ ತುಂಬಿಕೊಳ್ಳಲು ಶೇ.15 ರಷ್ಟು ಪ್ರಯಾಣ ದರ ಹೆಚ್ಚಳ
ಮಾಡಲು ಪ್ರಸ್ತಾವನೆ ಬಂದಿತ್ತು. ಆದರೆ ಸದ್ಯಕ್ಕೆ ಪ್ರಯಾಣ ದರ ಹೆಚ್ಚಳ ಪ್ರಸ್ತಾಪ ಕೈ ಬಿಟ್ಟು ಇಲಾಖೆಯ ವೆಚ್ಚ ಕಡಿತ ಹಾಗೂ ಇತರೆ ಮೂಲಗಳಿಂದ ಆದಾಯ ವೃದ್ಧಿಗೆ ಗಮನ ಹರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಆದಾಯ ವೃದ್ಧಿಗೆ ಬಸ್ ನಿಲ್ದಾಣಗಳಲ್ಲಿನ ಮಳಿಗೆಗಳ ಬಾಡಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕೆ ಪರಿಷ್ಕರಣೆ ಮಾಡಲಾಗುವುದು.  ರಾಜ್ಯಾ ದ್ಯಂತ ಇರುವ ಬಸ್ ನಿಲ್ದಾಣ ಗಳಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು. ಇದರಿಂದ ಪ್ರತಿ ವರ್ಷ 100 ರಿಂದ 200  ಕೋಟಿ ರು.  ಹೆಚ್ಚುವರಿ ಆದಾಯ ಬರಲಿದೆ. ಜತೆಗೆ ಡೀಸೆಲ್ ಬದಲು ವಿದ್ಯುತ್ ಬಸ್ಸುಗಳನ್ನು ಬಳಕೆ ಮಾಡಲಾಗುವುದು. ಬಿಎಂಟಿಸಿಯ ಟಿಟಿಎಂಸಿ ಕೇಂದ್ರಗಳಲ್ಲಿನ ಮಳಿಗೆಗಳನ್ನು ಕೂಡಲೇ ಬಾಡಿಗೆಗೆ ನೀಡುವಂತೆ ಆದೇಶಿಸುತ್ತೇನೆ ಎಂದರು. 

click me!