
ಹರಿದ್ವಾರ(ಆ.1): ನಿಮಗೆ ಇವರು ನೆನಪಿರಬೇಕಲ್ಲ. ಗೋಲ್ಡನ್ ಬಾಬಾ ಅಂತಾ ದೇಶಾದ್ಯಂತ ಮನೆ ಮಾತಾಗಿರುವ ಬಾಬಾ ಇವರೇ. ಮೈತುಂಬಾ ಚಿನ್ನಾಭರಣ ಧರಿಸಿ ತೀರ್ಥಯಾತ್ರೆಗೆ ಹೊರಡುವುದು ಇವರ ಕಾಯಕ.
ಈ ಬಾರಿ ಕೂಡ ಗೋಲ್ಡನ್ ಬಾಬಾ ಮೈತುಂಬಾ ಚಿನ್ನಾಭರಣ ಧರಿಸಿ ತೀರ್ಥಯಾತ್ರೆಗೆ ಹೊರಟಿದ್ದಾರೆ. ಆದರೆ ಈ ಬಾರಿ ಗೋಲ್ಡನ್ ಬಾಬಾ ಕಳೆದ ಬಾರಿಗಿಂತ ಹೆಚ್ಚಿನ ಚಿನ್ನಾಭರಣ ಧರಿಸಿದ್ದಾರೆ ಎಂಬುದು ವಿಶೇಷ.
ಇವರ ಹೆಸರು ಸುಧೀರ್ ಮಕ್ಕರ್ ಎಂದು. ತಾವು ಧರಿಸುವ ಚಿನ್ನಾಭರಣದಿಂದ ಗೋಲ್ಡನ್ ಬಾಬಾ ಎಂದು ಹೆಸರು ಪಡೆದಿದ್ದಾರೆ. ಸುಧೀರ್ ಈ ಬಾರಿ ತಮ್ಮ 25ನೇ ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಅದರಂತೆ ಈ ಬಾರಿ ತಮ್ಮ ಮೈಮೇಲೆ ಬರೋಬ್ಬರಿ 20 ಕೆಜಿ ಚಿನ್ನಾಭರಣ ಧರಿಸಿ ಯಾತ್ರೆಗೆ ತೆರಳುತ್ತಿದ್ದಾರೆ ಸುಧೀರ್. ಸುಧೀರ್ ಧರಿಸಿರುವ ಚಿನ್ನಾಭರಣದ ಮೌಲ್ಯ ಒಟ್ಟು 6 ಕೋಟಿ ರೂ.
ಉತ್ತರಾಖಂಡ್ ದಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಯಾತ್ರೆ ಹೊರಡುತ್ತಾರೆ. ಇದನ್ನೇ ಕನ್ವರ್ ಯಾತ್ರೆ ಎಂದು ಕರೆಯಲಾಗುತ್ತದೆ. ಇನ್ನು ಗೋಲ್ಡನ್ ಬಾಬಾ ಧರಿಸಿರುವ ಚಿನ್ನಾಭರನದಲ್ಲಿ 21ಬಳೆಗಳು, ದೇವರ ವಿಗ್ರಹಗಳಿಂದ ಕೂಡಿದ 21 ಲಾಕೆಟ್, ಕಡಗ, ಚಿನ್ನದ ಜಾಕೆಟ್ ಸೇರಿದಂತೆ ಇತರ ಆಭರಣಗಳಿವೆ.
ಈ ಎಲ್ಲಾ ಚಿನ್ನಾಭರಣಗಳನ್ನು ಧರಿಸಿ ತಮ್ಮ ಎಸ್‌ಯುವಿ ಕಾರಲ್ಲಿ ಗೋಲ್ಡನ್ ಬಾಬಾ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಇನ್ನು ಸುಧೀರ್ ಬಳಿ 1 ಬಿಎಂಡಬ್ಲ್ಯೂ, 2 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳಿರುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.