
ಬೆಂಗಳೂರು(ನ.11): ಚಿನ್ನ ಪ್ರಿಯರೇ ಗಮನಿಸಿ. ಬಂಗಾರದಂಗಡಿಯಲ್ಲಿ ನಡೀತಿದೆ ಮಹಾಮೋಸ. ಲಾಭಕ್ಕೆ ಚಿನ್ನದಂಗಡಿಗಳು ಮಾಡುತ್ತಿವೆ ದೇಶದ್ರೋಹ. ನಮ್ಮ ಕವರ್ ಸ್ಟೋರಿ ಬಯಲು ಮಾಡಿದ ಚಿನ್ನದಂಗಡಿಯ ಮಹಾ ಮೋಸದ ಬಗ್ಗೆ ಒಂದು ಕ್ಷಣ ಗಮನ ಕೊಟ್ಟು ಆ ಬಳಿಕ ಮುಂದುವರೆಯಿರಿ.
ಜಿಎಸ್'ಟಿ ಜಾರಿಯಾದ ಬಳಿಕವೂ ಬಿಲ್ ಇಲ್ಲದೇ, ಟ್ಯಾಕ್ಸ್ ಇಲ್ಲದೆಯೇ ವ್ಯವಹಾರ ನಡೆಸುವ ರಾಜಧಾನಿ ಬೆಂಗಳೂರಿನ ಅವಿನ್ಯೂ ರಸ್ತೆ, ಗಾಂಧಿ ನಗರ ಹಾಗೂ ಮಲ್ಲೇಶರಂನ ಹಲವು ಚಿನ್ನದಂಗಡಿಗಳ ಮಹಾಮೋಸವನ್ನು ಕವರ್ ಸ್ಟೋರಿ ತಂಡ ಬಟಾಬಯಲುಗೊಳಿಸಿದೆ. ಜಿಎಸ್'ಟಿ ಇಲ್ಲದೆ ಚಿನ್ನ ಖರೀದಿಸಿದ ಗ್ರಾಹಕರಿಗೆ ಕೇವಲ ಎಸ್ಟಿಮೇಟ್ ಬಿಲ್ ನೀಡುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವ ಚಿನ್ನದ ವ್ಯವಹಾರವನ್ನು ನಿಮ್ಮ ಮುಂದೆ ಕವರ್ ಸ್ಟೋರಿ ಬಿಚ್ಚಿಟ್ಟಿದೆ.
ಹಾಗಾಗಿ ಸ್ನೇಹಿತರೆ ತೆರಿಗೆ ಬಗ್ಗೆ ಭಯ ಬೇಡ. ಜಿಎಸ್'ಟಿ ಬಗ್ಗೆ ಅಸಡ್ಡೆಯೂ ಬೇಡ. ಅಸಡ್ಡೆ ಮಾಡಿದ್ರೆ ಮುಂದೊಂದು ದಿನ ನೀವೇ ಅಪಾಯಕ್ಕೆ ಸಿಲುಕಿಕೊಳ್ತೀರ ಜೋಕೆ. ಚಿನ್ನದ ಬೇಟೆ ಕುರಿತು ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ಚರ್ಚೆ ನಡೆಯಲಿದ್ದು, ತಪ್ಪದೇ ವೀಕ್ಷಿಸಿ...
ವರದಿ: ವಿಜಯಲಕ್ಷ್ಮಿ ಶಿಬರೂರು(ಕವರ್ ಸ್ಟೋರಿ ತಂಡ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.