
ಚೆನ್ನೈ (ಫೆ.06): ಇಲ್ಲಿನ ಮೈಲಾದುತುರೈನ ಮಯೂರನಾಥಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಸಲ್ವಾರ್ ಕಮೀಜ್ ರೀತಿಯ ಅಲಂಕಾರ ಮಾಡಿದ್ದು, ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕನನ್ನು ಸೇವೆಯಿಂದ ಕೈಬಿಡಲಾಗಿದೆ. 6 ತಿಂಗಳ ಹಿಂದಷ್ಟೇ ಸೇವೆಗೆ ನಿಯೋಜನೆಯಾಗಿದ್ದ ಅರ್ಚಕರ ಪುತ್ರಗೆ ದೇವಸ್ಥಾನದ ಆಚಾರ-ವಿಚಾರಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಹೀಗಾಗಿ ಶುಕ್ರವಾದ ದೇವತೆ ವಿಗ್ರಹ ಶುಚಿಗೊಳಿಸಿದ ಅರ್ಚಕರ ಪುತ್ರ ರಾಜ್, ಬಳಿಕ ದೇವತೆಗೆ ಸೀರೆ ತೊಡಿಸುವ ಬದಲು ಉತ್ತರ ಭಾರತದ ಶೈಲಿಯಲ್ಲಿ ನೀಲಿ ದುಪ್ಪಟ್ಟಾ, ಪಿಂಕ್ ಕಮೀಜ್ ಮತ್ತು ನೀಲಿ ಸಲ್ವಾರ್ ತೊಡಿಸಿದ್ದ. ಈ ಅಚಾತುರ್ಯವನ್ನು ಮನಗಾಣದ ಪ್ರಧಾನ ಅರ್ಚಕ ಸಹ ದೇವಿಯ ವಿಗ್ರಹದ ಫೋಟೊ ಕ್ಲಿಕ್ಕಿಸಿ, ಫೇಸ್‌ಬುಕ್ಕಲ್ಲಿ ಹಾಕಿದ್ದರು. ಅದು ವಿವಾದಕ್ಕೆ ಕಾರಣವಾದ ಬಳಿಕ ಅಪ್ಪ, ಮಗ ಇಬ್ಬರನ್ನೂ ಸೇವೆಯಿಂದ ಕೈಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.