
ಗೋವಾ: ಕರ್ನಾಟಕ ಮೂಲದ ವ್ಯಕ್ತಿಯೊಬ್ಬನನ್ನು ಪತ್ನಿಯೇ ತನ್ನ ನಾಲ್ವರು ಪ್ರಿಯಕರರೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಮೃತದೇಹವನ್ನು ಮೂರು ಭಾಗಗಳನ್ನಾಗಿ ಕತ್ತರಿಸಿ, ಬೇರೆ ಬೇರೆ ಕಡೆ ಎಸೆದಿದ್ದು, ಇಲ್ಲಿನ ಕೊರ್ಕೆರೆಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಸವರಾಜ್ ಬರಿಕಿ (38) ಮೃತ ದುರ್ದೈವಿ. ಆರೋಪಿ ಕಲ್ಪನಾ ಬರಿಕಿ (30) ಹಾಗೂ ರಾಜಸ್ಥಾನದ ಸುರೇಶ್ ಕುಮಾರ್, ಗೋವಾದ ಪಂಕಜ್ ಪವಾರ್ ಮತ್ತು ಕಾಕೋರಾದ ಅಬ್ದುಲ್ ಶೇಖ್ ಎಂಬುವವರನ್ನೂ ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಸವರಾಜ್ ಟ್ಯಾಕ್ಸಿ ಚಾಲಕನಾಗಿದ್ದು, 15 ದಿನಗಳಿಗೊಮ್ಮೆ ಮನೆಗೆ ಆಗಮಿಸುತ್ತಿದ್ದರು. ತನ್ನ ಅನೈತಿಕ ಸಂಬಂಧವನ್ನು ಪತಿ ವಿರೋಧಿಸುತ್ತಿದ್ದರಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಪತ್ನಿ, ಪತಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದಾಳೆ. ತನ್ನ ಸಂಚನ್ನು ಕಾರ್ಯಗತಗೊಳಿಸಲು, ಅನೈತಿಕ ಸಂಬಂಧವಿಟ್ಟುಕೊಂಡವರ ನೆರವು ಪಡೆದಿದ್ದಾಳೆ. ಉಸಿರುಗಟ್ಟಿಸಿ, ಬಸವರಾಜು ಅವರನ್ನು ಕೊಲೆ ಮಾಡಿದ್ದು, ಎಸೆಯಲು ಅನುಕೂಲವಾಗುವಂತೆ ಮೃತದೇಹವನ್ನು ಮೂರು ಭಾಗಗಳನ್ನಾಗಿ ಕತ್ತರಿಸಲಾಗಿತ್ತು. ಕರ್ನಾಟಕದ-ಗೋವಾ ಗಡಿ ಭಾಗವಾದ ಅನ್ಮೋಡ್ ಘಾಟಿ ಸೇರಿ ವಿವಿಧೆಡೆ ಈ ಭಾಗಗಳನ್ನು ಎಸೆಯಲಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಏಪ್ರಿಲ್ 1 ರಂದೇ ನಡೆದ ಈ ಕೃತ್ಯ ಪ್ರತ್ಯಕ್ಷದರ್ಶಿ ನೀಡಿದ ಸುಳಿವಿನ ಮೇರೆಗೆ ಬೆಳಕಿಗೆ ಬಂದಿದೆ. ಬಸವರಾಜು ಅವರಿಗೆ ಗೋವಾದಲ್ಲಿ ಯಾವ ಸಂಬಂಧಿಕರೂ ಇಲ್ಲದ ಕಾರಣ, ಅವರು ಕಾಣೆಯಾದ ಬಗ್ಗೆ ಯಾರಿಗೂ ಮಾಹಿತಿಯೇ ಇರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.