
ಪಣಜಿ (ನ.27): ನೋಟ್ ನಿಷೇಧ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಮೊಬೈಲ್ ಮೂಲಕ ನಗದು ರಹಿತ ಪಾವತಿಗೆ ಒತ್ತು ನೀಡಲು ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಮೊದಲ ರಾಜ್ಯವಾಗಿ ಗೋವಾ ಡಿ.31ರಿಂದ ನಗದು ರಹಿತ ಪಾವತಿ ರಾಜ್ಯವಾಗುತ್ತಿದೆ. ಗೋವಾದಲ್ಲಿ ಮೀನು, ತರಕಾರಿ ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಲು ಮೊಬೈಲ್ ಬಟನ್ ಒತ್ತಿದರೆ ಸಾಕು. ವ್ಯಾಪಾರ ಮಾಡಿ ಮುಗಿಸಬಹುದು.
ಕೈಯಲ್ಲಿ ಪರ್ಸ್ ಹಿಡಿದು, ಪಿಕ್ ಪಾಕೆಟರ್ಸ್‌ಗೆ ಹೆದರುವ ಅಗತ್ಯವೇ ಇನ್ನಿರುವುದಿಲ್ಲ. ವ್ಯಾಪಾರ ಮಾಡಿದ ಹಣ ನೇರವಾಗಿ ವ್ಯಾಪಾರಿಯ ಖಾತೆಗೇ ಜಮೆಯಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ನಗದು ರಹಿತ ವ್ಯಾಪಾರದ ಬಗ್ಗೆ ನಾಗರಿಕರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.