ಕರಾವಳಿಗರಿಗೆ ಕಾದಿದೆ ಗಂಡಾಂತರ..! ಇದು ನಾಸಾ ಕೊಟ್ಟ ಎಚ್ಚರಿಕೆ..!

Published : Nov 17, 2017, 09:18 AM ISTUpdated : Apr 11, 2018, 01:02 PM IST
ಕರಾವಳಿಗರಿಗೆ ಕಾದಿದೆ ಗಂಡಾಂತರ..! ಇದು ನಾಸಾ ಕೊಟ್ಟ ಎಚ್ಚರಿಕೆ..!

ಸಾರಾಂಶ

ಭಾರತದಲ್ಲಿ ಮಂಗಳೂರು, ಮುಂಬೈ, ಆಂಧ್ರದ ಕಾಕಿನಾಡ ಸೇರಿದಂತೆ ಜಗತ್ತಿನ 293 ಬಂದರು ನಗರಗಳಲ್ಲಿನ ಸಮುದ್ರ ಮಟ್ಟ ಏರಿಕೆಯನ್ನು ನಾಸಾದ ಹೊಸ ತಂತ್ರಜ್ಞಾನದ ಮೂಲಕ ವಿಶ್ಲೇಷಿಸಲಾಗಿದೆ.

ನವದೆಹಲಿ(ನ.17): ನೀರ್ಗಲ್ಲು ಕರಗಿ ಸಮುದ್ರ ಮಟ್ಟ ಏರುವಿಕೆಯಿಂದ ಉಂಟಾಗುವ ಅಪಾಯದ ಸಂಭಾವ್ಯತೆಯಲ್ಲಿ ಮಂಗಳೂರು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. 100 ವರ್ಷಗಳಲ್ಲಿ ಮಂಗಳೂರಿನ ಕಡಲ ಮಟ್ಟ 16 ಸೆಂ.ಮೀ. ಏರಬಹುದೆಂದು ವರದಿಯಾಗಿದೆ. ನೀರ್ಗಲ್ಲು ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಉಂಟಾಗುವ ಏರಿಕೆ ಪರಿಣಾಮ ಪ್ರವಾಹ ಭೀತಿ ಎದುರಿಸಲಿರುವ ನಗರಗಳ ಪೈಕಿ ಕರ್ನಾಟಕದ ಮಂಗಳೂರು ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ನಾಸಾ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸಿದೆ.

ಇಂಥದ್ದೊಂದು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮುದ್ರ ತಟದಲ್ಲಿರುವ ಅಮೆರಿಕದ ನ್ಯೂಯಾರ್ಕ್, ಭಾರತದ ವಾಣಿಜ್ಯ ನಗರಿ ಮುಂಬೈಗಿಂತಲೂ ಮಂಗಳೂರು ಹೆಚ್ಚಿನ ಅಪಾಯದಲ್ಲಿದೆ ಎಂದು ವರದಿ ಹೇಳಿದೆ. ಮುಂದಿನ 100 ವರ್ಷಗಳಲ್ಲಿ ನೀರ್ಗಲ್ಲು ಕರಗುವಿಕೆಯಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ದಾಖಲಾಗುತ್ತದೆ. ಮಂಗಳೂರಿನ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ 15.98 ಸೆಂ.ಮೀನಷ್ಟು ಇರುತ್ತದೆ. ಮುಂಬೈನಲ್ಲಿ ಈ ಪ್ರಮಾಣ 15.26 ಸೆಂ.ಮೀ ಮತ್ತು ನ್ಯೂಯಾರ್ಕ್‌'ನಲ್ಲಿ 10.65 ಸೆಂ.ಮೀನಷ್ಟು ಇರಲಿದೆ ಎಂದು ನಾಸಾದ ವರದಿ ಹೇಳಿದೆ.ಈ ಕುರಿತ ಲೇಖನ ಜರ್ನಲ್ ಸೈನ್ಸ್ ಅಡ್ವಾನ್ಸ್'ನಲ್ಲಿ ಪ್ರಕಟವಾಗಿದೆ.

ಇದುವರೆಗೆ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಹೆಚ್ಚು ಅಪಾಯದಲ್ಲಿದೆ ಎಂದು ಊಹಿಸಲಾಗಿತ್ತು. ಆದರೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಕುರಿತು ಅಧ್ಯಯನ ನಡೆಸಲು ನಾಸಾ ಸಿದ್ಧಪಡಿಸಿರುವ ಹೊಸ ತಂತ್ರಜ್ಞಾನದಿಂದಾಗಿ, ಇಂಥ ಅಪಾಯಕಾರಿ ನಗರಗಳ ಸ್ಥಾನಗಳಲ್ಲಿ ಏರುಪೇರಾಗಿದ್ದು, ಮಂಗಳೂರು ಮುಂಚೂಣಿಗೆ ಬಂದಿದೆ. ಭಾರತದಲ್ಲಿ ಮಂಗಳೂರು, ಮುಂಬೈ, ಆಂಧ್ರದ ಕಾಕಿನಾಡ ಸೇರಿದಂತೆ ಜಗತ್ತಿನ 293 ಬಂದರು ನಗರಗಳಲ್ಲಿನ ಸಮುದ್ರ ಮಟ್ಟ ಏರಿಕೆಯನ್ನು ನಾಸಾದ ಹೊಸ ತಂತ್ರಜ್ಞಾನದ ಮೂಲಕ ವಿಶ್ಲೇಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!