ಸ್ಮಾರ್ಟ್‌ಫೋನ್ ಕೊಡಿಸದ ಲವರ್‌ಗೆ ನಡುಬೀದಿಯಲ್ಲೇ ಬಾರಿಸಿದ ಪ್ರೇಯಸಿ

Published : May 27, 2019, 01:14 PM ISTUpdated : May 27, 2019, 01:27 PM IST
ಸ್ಮಾರ್ಟ್‌ಫೋನ್ ಕೊಡಿಸದ ಲವರ್‌ಗೆ ನಡುಬೀದಿಯಲ್ಲೇ ಬಾರಿಸಿದ ಪ್ರೇಯಸಿ

ಸಾರಾಂಶ

ಸ್ಮಾರ್ಟ್ ಫೋನ್ ಕೊಡಿಸದ ಬಾಯ್‌ಫ್ರೆಂಡ್‌ಗೆ ನಡುರಸ್ತೆಯ್ಲಲೇ ಥಳಿಸಿದ ಪ್ರೇಯಸಿ| ನಡುರಸ್ತೆಯಲ್ಲೇ 52 ಬಾರಿ ಕಪಾಳಮೋಕ್ಷ ಮಾಡಿದ ಪ್ರೇಯಸಿ| ಸಿಸಿಟಿವಿಯ್ಲಲಿ ಸೆರೆಯಾಯ್ತು ದೃಶ್ಯ

ಬೀಜಿಂಗ್[ಮೇ.27]: ಹುಟ್ಟುಹಬ್ಬ, ಆ್ಯನಿವರ್ಸರಿ ಹಾಗೂ ಪ್ರೇಮಿಗಳ ದಿನದಂದು ಗರ್ಲ್‌ಫ್ರೆಂಡ್ ಮುಖದಲ್ಲಿ ನಗು ಮೂಡಿಸಲು ಬಾಯ್‌ಫ್ರೆಂಡ್ ಗಿಫ್ಟ್ ಕೊಡುವುದು ಸಾಮಾನ್ಯ. ಆದರೆ ಚೀನಾದ ದಾಹೌ ನಗರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ ಎಂದು ನಡುರಸ್ತೆಯಲ್ಲೇ ಆತನಿಗೆ ಬರೋಬ್ಬರಿ 52 ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಈ ದೃಶ್ಯಾವಳಿಗಳು ರಸ್ತೆ ಬದಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಇದು ಸಾಮಾಜಿಕ ಜಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕೊಂಚವೂ ಬಿಡುವು ನೀಡದ ಯುವತಿ ಒಂದಾದ ಬಳಿಕ ಮತ್ತೊಂದರಂತೆ ತನ್ನ ಎದುರು ನಿಂತಿದ್ದ ಪ್ರಿಯಕರನಿಗೆ 52 ಬಾರಿ ಕಪಾಳಕ್ಕೆ ಬಾರಿಸುತ್ತಾಳೆ. ಸಾಲದೆಂಬಂತೆ ಅತನಿಗೆ ಬೈಯ್ಯುತ್ತಿರುತ್ತಾಳೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಯುವತಿಯನ್ನು ತಡೆಯಲು ಮುಂದಾದಾಗ, ಯುವತಿ ಮತ್ತೆ ಕೋಪಗೊಳ್ಳುವುದನ್ನು ತಪ್ಪಿಸಲು ಪ್ರಿಯಕರ ಪೊಲೀಸರನ್ನೇ ತಡೆಯುತ್ತಾನೆ. ಬಳಿಕ ಇಬ್ಬರನ್ನೂ ಮನಃಶಾಸ್ತ್ರಜ್ಞರ ಬಳಿ ಕರೆದೊಯ್ದು ಕೌನ್ಸೆಲಿಂಗ್ ನೀಡಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!