ನಟ ದುನಿಯಾ ವಿಜಿ ಕುಟುಂಬದ ವಿರುದ್ಧ ಮತ್ತೊಂದು ಕೇಸ್..!

Published : Oct 27, 2018, 10:46 PM IST
ನಟ ದುನಿಯಾ ವಿಜಿ ಕುಟುಂಬದ ವಿರುದ್ಧ ಮತ್ತೊಂದು ಕೇಸ್..!

ಸಾರಾಂಶ

ದುನಿಯಾ ವಿಜಯ್ ಹಾಗೂ ಅವರ ಕುಟುಂಬದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಏನದು ಕೇಸ್ ಇಲ್ಲಿದೆ ವಿವರ.

ಬೆಂಗಳೂರು, [ಅ.27]: ಸ್ಯಾಂಡಲ್​ವುಡ್​​ನ ದುನಿಯಾ ವಿಜಯ್ ಹಾಗೂ ಅವರ ಕುಟುಂಬದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. 

ದುನಿಯಾ ವಿಜಿ ಕುಟುಂಬ ಹಾಗೂ ಅವರ ಮೊದಲ ಪತ್ನಿ ನಾಗರತ್ನ ಕುಟುಂಬದ ವಿರುದ್ಧ ಗಿರಿನಗರ ಪೊಲೀಸರು ಸ್ವಯಂ ಪ್ರೇರಿತವಾಗಿ  ಸೊಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸೆಲೆಬ್ರಿಟಿ ಆಗಿದ್ದುಕೊಂಡು ಸಮಾಜಕ್ಕೆ ರೋಲ್ ಮಾಡೆಲ್ ಆಗಿರಬೇಕಾಗಿದ್ದ ಇವರು, ಸದಾ ಬೀದಿ ರಂಪಾಟ, ಹಾದಿ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಆರೋಪಿಸಿ 107 CRPC ಅಡಿಯಲ್ಲಿ  ವಿಜಿ ಸೇರಿ ಕುಟುಂಬದ  7 ಜನರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ದುನಿಯಾ ವಿಜಯ್, ವಿಜಿ ಪತ್ನಿಯರಾದ ಕೀರ್ತಿ ಗೌಡ , ನಾಗರತ್ನ , ವಿಜಿ ತಂದೆ , ನಾಗರತ್ನ ತಮ್ಮ , ಮತ್ತಿಬ್ಬರು ಬಾಡಿ ಗಾರ್ಡ್ ಮೇಲೆ ದೂರು ದಾಖಲಾಗಿದ್ದು, ಮತ್ತೆ ಗಲಾಟೆ ಮಾಡಿಕೋಳ್ಳದಂತೆ ದುನಿಯಾ ವಿಜಿ ಕುಟುಂಬಕ್ಕೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ