ರೆಡ್ಡಿಯ 884 ಕೋಟಿ ರೂ.ಆಸ್ತಿ ವಾಪಸ್ ನೀಡಲು ಹೈಕೋರ್ಟ್ ಆದೇಶ

By Suvarna Web DeskFirst Published Mar 13, 2017, 2:37 PM IST
Highlights

ಅಕ್ರಮ ‌ಗಣಿಗಾರಿಕೆ ಪ್ರಕರಣದಲ್ಲಿ 2011 ರಲ್ಲಿ ಜಾರಿ ನಿರ್ದೇಶನಾಲವು ಜನಾರ್ದನ ರೆಡ್ಡಿ ಮನೆ, ಹೆಲಿಕಾಪ್ಟರ್ ಇತ್ಯಾದಿ ಸೇರಿದಂತೆ 884 ಕೋಟಿ ರೂಪಾಯಿ ಮೊತ್ತದ ಆಸ್ತಿ ಜಪ್ತಿ ಮಾಡಿಕೊಂಡಿತ್ತು. ನ್ಯಾಯಾಲಯವು ರೆಡ್ಡಿ ವಿರುದ್ಧದ ಇಡಿ, ಒಎಂಸಿ, ಬ್ರಹ್ಮಿಣಿ ಸ್ಟೀಲ್, ಲಕ್ಷ್ಮಿ ಅರುಣಾ ವಿರುದ್ಧ ಪ್ರಕರಣಗಳನ್ನು ರದ್ದು ಪಡಿಸಿದೆ.

ಬೆಂಗಳೂರು(ಮಾ.13): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಶಪಡಿಕೊಂಡಿದ್ದ ಗಾಲಿ ಜನಾರ್ದನ ರೆಡ್ಡಿಯ 884 ಕೋಟಿ ರೂ. ಮೊತ್ತದ ಆಸ್ತಿಯನ್ನು ವಾಪಸ್ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

ಅಕ್ರಮ ‌ಗಣಿಗಾರಿಕೆ ಪ್ರಕರಣದಲ್ಲಿ 2011 ರಲ್ಲಿ ಜಾರಿ ನಿರ್ದೇಶನಾಲವು ಜನಾರ್ದನ ರೆಡ್ಡಿ ಮನೆ, ಹೆಲಿಕಾಪ್ಟರ್ ಇತ್ಯಾದಿ ಸೇರಿದಂತೆ 884 ಕೋಟಿ ರೂಪಾಯಿ ಮೊತ್ತದ ಆಸ್ತಿ ಜಪ್ತಿ ಮಾಡಿಕೊಂಡಿತ್ತು. ನ್ಯಾಯಾಲಯವು ರೆಡ್ಡಿ ವಿರುದ್ಧದ ಇಡಿ, ಒಎಂಸಿ, ಬ್ರಹ್ಮಿಣಿ ಸ್ಟೀಲ್, ಲಕ್ಷ್ಮಿ ಅರುಣಾ ವಿರುದ್ಧ ಪ್ರಕರಣಗಳನ್ನು ರದ್ದು ಪಡಿಸಿದೆ.

2004 - 2006 ರ ನಡುವೆ ಅಕ್ರಮ‌ ಗಣಿಗಾರಿಕೆ ನಡೆದಿತ್ತು. ಆದರೆ 2009 ರಲ್ಲಿ ಪಿಎಂಎಲ್ ಕಾಯ್ದೆ ತಿದ್ದುಪಡಿಯಾಗಿತ್ತು. ಕಾಯ್ದೆ ಪೂರ್ವಾನ್ವಯ ಸಾಧ್ಯವಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ. ಆಸ್ತಿ ವಾಪಸ್ ನೀಡುವಂತೆ ಗಾಲಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೋರೆ ಹೋಗಿದ್ದರು.

click me!