ಪೂರ್ಣಾವಧಿ ಸಿಎಂ ತೀರ್ಮಾನವಾಗಿಲ್ಲ: ಡಿಸಿಎಂ

First Published May 30, 2018, 8:25 AM IST
Highlights

ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಅವರ ಅಧಿ​ಕಾ​ರಾ​ವಧಿ ಕುರಿತ ಗೊಂದ​ಲ ಇನ್ನೂ ಬಗೆ​ಹ​ರಿ​ದಂತೆ ಕಾಣು​ತ್ತಿ​ಲ್ಲ. ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ. ಈ ಕುರಿತು ಈವ​ರೆಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಉಪ ಮುಖ್ಯ​ಮಂತ್ರಿ ​ಡಾ.​ಜಿ.ಪರಮೇಶ್ವರ್‌ ಪುನ​ರು​ಚ್ಛ​ರಿ​ಸಿ​ದ್ದಾ​ರೆ.

ತುಮಕೂರು :  ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಅವರ ಅಧಿ​ಕಾ​ರಾ​ವಧಿ ಕುರಿತ ಗೊಂದ​ಲ ಇನ್ನೂ ಬಗೆ​ಹ​ರಿ​ದಂತೆ ಕಾಣು​ತ್ತಿ​ಲ್ಲ. ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ. ಈ ಕುರಿತು ಈವ​ರೆಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಉಪ ಮುಖ್ಯ​ಮಂತ್ರಿ ​ಡಾ.​ಜಿ.ಪರಮೇಶ್ವರ್‌ ಪುನ​ರು​ಚ್ಛ​ರಿ​ಸಿ​ದ್ದಾ​ರೆ.

ಇಲ್ಲಿನ ಸಿದ್ಧಗಂಗಾ ಮಠಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ, ಡಾ.ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಚಾರ ತಿಳಿ​ಸಿ​ದ್ದಾ​ರೆ.

ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ. ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡಲು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಸರ್ಕಾರ ಕಾನೂನುಬದ್ಧವಾಗಿ ರಚಿತವಾಗಿದೆ ಎಂದರು.

2008ರಿಂದ 2013ರವರೆಗೆ ಬಿಜೆಪಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗಿದೆ. ಸಾಮಾನ್ಯ ಜನರಿಗೆ, ಕಾರ್ಮಿಕರಿಗೆ, ರೈತರಿಗೆ ಒಟ್ಟಾರೆ ಎಲ್ಲರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದ ಈ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಸುಸ್ಥಿರ ಸರ್ಕಾರಕ್ಕಾಗಿ ಹಿರಿಯ ಮುಖಂಡರ ಜೊತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿ​ಸಿ​ದ​ರು.

click me!