ತ್ರಿವಳಿ ತಲಾಖ್‌ ಹೊಸ ಮಸೂದೆ ಇಂದು ಮಂಡನೆ

By Web DeskFirst Published Jun 21, 2019, 11:43 AM IST
Highlights

ಮುಸ್ಲಿಂ ಮಹಿಳೆಯರಿಗೆ ಸಿಂಹ ಸ್ವಪ್ನವಾಗಿರುವ ತ್ರಿವಳಿ ತಲಾಖ್ ಮಸೂದೆಯ ಹೊಸ ರೂಪವಿಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ತ್ರಿವಳಿ ತಲಾಕ್ ನಿಷೇಧಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಗುರುವಾರ ಪುನಾ ಹತ್ತು ಸುಗ್ರೀವಾಜ್ಞೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ನವದೆಹಲಿ (ಜು.21): ಕಳೆದ ಎನ್‌ಡಿಎ ಸರಕಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿ, ಕಾನೂನಾಗಿ ರೂಪಿಸಲು ಸಾಧ್ಯವಾಗದೇ ಇರುವ ತ್ರಿವಳಿ ತಲಾಖ್‌ ಸೇರಿ ಒಟ್ಟು 10 ಸುಗ್ರೀವಾಜ್ಞೆಗಳನ್ನು ಗುರುವಾರ ಸರಕಾರ ಮತ್ತೆ ಮಂಡಿಸಿದೆ. ಮಹಿಳೆಯರ ಮದುವೆ ಹಕ್ಕು ಮತ್ತು ರಕ್ಷಣೆ ಕಾಯ್ದೆ 2019 ಸೇರಿ ಉಳಿದ ಹೊಸ ಮಸೂದೆಗಳು ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಸುಗ್ರೀವಾಜ್ಞೆ ಹೊರಡಿಸಿದ 45 ದಿನಗಳಲ್ಲಿ ಕಾಯ್ದೆ ಕಾನೂನಾಗಿ ಮಾರ್ಪಾಡಬೇಕು. ಆದರೆ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಭಾರತೀಯ ವೈದ್ಯಕೀಯ ಮಂಡಳಿ, ಕಂಪನಿಗಳ ಸುಗ್ರೀವಾಜ್ಞೆ, ಜಮ್ಮು-ಕಾಶ್ಮೀರ ಮೀಸಲಾತಿ, ಆಧಾರ್‌, ವಿಶೇಷ ಆರ್ಥಿಕ ವಲಯ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಸೇರಿ ಕೆಲವು ಮಸೂದೆಗಳು ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ. 

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ಕಾನೂನು ರದ್ದು

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್‌, ಆಧಾರ್‌ ಸೇರಿದಂತೆ 10 ಸುಗ್ರಿವಾಜ್ಞೆಗಳನ್ನು ಹೊಸ ಮಸೂದೆಗಳಾಗಿ ಮಂಡಿಸಿ ಸಂಸತ್ತಿನಲ್ಲಿ ಮಂಡಿಸಲು ಒಪ್ಪಿಗೆ ಪಡೆಯಲಾಗಿತ್ತು. ವಿಶೇಷವಾಗಿ ತ್ರಿವಳಿ ತಲಾಕ್ ಶಿಕ್ಷೆಯಾಗಬಲ್ಲ ಅಪಾರಧವೆನ್ನುವ ಮಸೂದೆ ಜಾರಿಗೊಳ್ಳಲಿದ್ದು, ಎಲ್ಲಿಯಾಯ್ತೋ ಅಲ್ಲಿ, ಹೇಗಾಯ್ತೋ ಅಲ್ಲಿ ವಿಚ್ಛೇದನ ನೀಡಬಹುದಾಗಿದ್ದ ಪದ್ಧತಿಗೆ ಇನ್ನು ಬ್ರೇಕ್ ಬೀಳಲಿದೆ.

ಕಲಾಪ ಆರಂಭವಾದ 45 ದಿನಗಳ ಒಳಗಾಗಿ ಈ ಎಲ್ಲ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ರೂಪಿಸಬೇಕು. ಇಲ್ಲದಿದ್ದರೆ, ಈ ಎಲ್ಲ ಸುಗ್ರೀವಾಜ್ಞೆಗಳು ತಾವಾಗಿಯೇ ರದ್ದಾಗಲಿವೆ. 

click me!