ಧ್ವ ಜ ಸತ್ಯಾಗ್ರಹ ನಡೆಸಿ ಬ್ರಿಟಿಷರ ತೆರಿಗೆಗೆ ಸಡ್ಡು ಹೊಡೆದ ಶಿವಪುರ

By Web DeskFirst Published Aug 15, 2018, 10:14 AM IST
Highlights

ಸ್ವಾತಂತ್ರ್ಯ ಹೋರಾಟದಲ್ಲಿ ಶಿವಪುರದ ಧ್ವಜ ಸತ್ಯಾಗ್ರಹ ಪ್ರಖ್ಯಾತವಾಗಿದೆ. ಮಂಡ್ಯದ ಬಳಿ ಶಿಂಷಾ ನದಿ ದಂಡೆಯ ಮೇಲಿರುವ ಶಿವಪುರ ಗ್ರಾಮದಲ್ಲಿ 1938 ರ ಏಪ್ರಿಲ್ 9 ರಂದು ತಿರುಮಲೇಗೌಡ ಎಂಬವರ ಹೊಲದಲ್ಲಿ ತ್ರಿವರ್ಣ ಧ್ವಜವನ್ನು
ಹಾರಿಸಲಾಯಿತು. 

ಮಂಡ್ಯ (ಆ. 15): ಸ್ವಾತಂತ್ರ್ಯ ಹೋರಾಟದಲ್ಲಿ ಶಿವಪುರದ ಧ್ವಜ ಸತ್ಯಾಗ್ರಹ ಪ್ರಖ್ಯಾತವಾಗಿದೆ.

ಮಂಡ್ಯದ ಬಳಿ ಶಿಂಷಾ ನದಿ ದಂಡೆಯ ಮೇಲಿರುವ ಶಿವಪುರ ಗ್ರಾಮದಲ್ಲಿ 1938 ರ ಏಪ್ರಿಲ್ 9 ರಂದು ತಿರುಮಲೇಗೌಡ ಎಂಬವರ ಹೊಲದಲ್ಲಿ ತ್ರಿವರ್ಣ ಧ್ವಜವನ್ನು  ಹಾರಿಸಲಾಯಿತು. ಮೈಸೂರು ಅರಸರ ಮೂಲಕ ಬ್ರಿಟಿಷ್ ಸರ್ಕಾರವು ರೈತರ ಮೇಲೆ ಹೇರಿದ ತೆರಿಗೆಯನ್ನು ಪ್ರತಿಭಟಿಸುವುದಕ್ಕಾಗಿ ಈ ಪ್ರತಿಭಟನೆ ನಡೆದಿತ್ತು.

Latest Videos

ಆ ಕಾಲದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟಗಾರರು ಮೈಸೂರು ಕಾಂಗ್ರೆಸ್‌ನ ಮೊದಲ ಅಧಿವೇಶನವನ್ನು ಶಿವ ಪುರದಲ್ಲಿ ಏರ್ಪಡಿಸಿ ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಧರಿಸಿದರು. ಅದರಲ್ಲಿ 10 ಸಾವಿರ ಜನರು ಭಾಗವಹಿಸಿದ್ದರು. ಸದ್ಯ ಅಲ್ಲಿ ಸತ್ಯಾಗ್ರಹ ಸ್ಮಾರಕವನ್ನು ನಿರ್ಮಿಸಲಾಗಿದೆ. 

click me!