ಕರ್ನಾಟಕದ ಜಲಿಯನ್ ವಾಲಾಬಾಗ್ ವಿದುರಾಶ್ವತ್ಥ

By Web DeskFirst Published Aug 15, 2018, 9:47 AM IST
Highlights

ಪಂಜಾಬ್‌ನ ಜಲಿಯನ್ ವಾಲಾಬಾಗ್  ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಹಿ ಅಧ್ಯಾಯ. ಅಂಥದ್ದೇ ಕಹಿ ಅಧ್ಯಾಯಕ್ಕೆ ಕರ್ನಾಟಕದ ವಿಧುರಾಶ್ವತ್ಥವೂ  ಸಾಕ್ಷಿಯಾಗಿತ್ತು.

ಚಿಕ್ಕಬಳ್ಳಾಪುರ (ಆ. 15): ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಸಂಗ್ರಾಮದ  ಕಹಿ ಅಧ್ಯಾಯ. ಅಂಥದ್ದೇ ಕಹಿ ಅಧ್ಯಾಯಕ್ಕೆ ಕರ್ನಾಟಕದ ವಿಧುರಾಶ್ವತ್ಥವೂ ಸಾಕ್ಷಿಯಾಗಿತ್ತು.

ಬ್ರಿಟಿಷರ ವಿರುದ್ಧ ಹೋರಾಡಿ 30 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಪುಟ್ಟ ಗ್ರಾಮ ವಿಧುರಾಶ್ವತ್ಥ ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ‘ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ’ ಎಂದೇ ಹೆಸರಾಗಿದೆ.

1938 ರ ಏಪ್ರಿಲ್ 25 ರಂದುವಿಧುರಾಶ್ವತ್ಥದಲ್ಲಿ ಕಾಂಗ್ರೆಸ್ ಸಮಿತಿಯು ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಹೇರಿತು. ಇದನ್ನು ಉಲ್ಲಂಘಿಸಿ ಧ್ವಜಾರೋಹಣ ಮಾಡಿದ್ದ ಹೋರಾಟಗಾರರ ಮೇಲೆ ಬ್ರಿಟಿಷರು ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಮೃತ ಪಟ್ಟರು, ಹಲವರು ಗಾಯಗೊಂಡರು. ಬಲಿದಾನ ಮಾಡಿದವರಲ್ಲಿ 10 ದೇಹಗಳು ಮಾತ್ರ ಪತ್ತೆಯಾದವು. ಈ ಹೋರಾಟ ಕರ್ನಾಟಕದ
ಜಲಿಯನ ವಾಲಾಬಾಗ್ ಎಂದೇ ಖ್ಯಾತಿಯಾಗಿದೆ. 

click me!