ಮುಂದಿನ ಟಾಪ್-10 ನಾಯಕರ ಪಟ್ಟಿಗೆ ಗುರ್ಮೀತ್ ಕೌರ್ ಆಯ್ಕೆ

Published : Oct 13, 2017, 06:28 PM ISTUpdated : Apr 11, 2018, 01:07 PM IST
ಮುಂದಿನ ಟಾಪ್-10 ನಾಯಕರ ಪಟ್ಟಿಗೆ ಗುರ್ಮೀತ್ ಕೌರ್ ಆಯ್ಕೆ

ಸಾರಾಂಶ

ಯೋಧರ ಬಗ್ಗೆ ದಿಟ್ಟವಾಗಿ ಮಾತನಾಡಿದ ಗುರ್ಮೀತ್ ಕೌರ್’ನನ್ನು ಟೈಮ್ ಮ್ಯಾಗಜಿನ್ 2017 ನೇ ಸಾಲಿನ ಮುಂದಿನ ಪೀಳಿಗೆಯ ಟಾಪ್  10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದೆ.

ನವದೆಹಲಿ (ಅ.13): ಯೋಧರ ಬಗ್ಗೆ ದಿಟ್ಟವಾಗಿ ಮಾತನಾಡಿದ ಗುರ್ಮೀತ್ ಕೌರ್’ನನ್ನು ಟೈಮ್ ಮ್ಯಾಗಜಿನ್ 2017 ನೇ ಸಾಲಿನ ಮುಂದಿನ ಪೀಳಿಗೆಯ ಟಾಪ್ 10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದೆ.

ಗುರ್ಮೀತ್ ತಂದೆ ಸೇನಾಧಿಕಾರಿ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರ ಗುಂಡಿಗೆ ಬಲಿಯಾದಾಗ ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಬದಲಿಗೆ ಯುದ್ಧ ಎಂದು ಪ್ಲಕಾರ್ಡ್ ಹಿಡಿದು ವಿರೋಧಿಸಿದ್ದರು. ಇದು ದೇಶಾದ್ಯಂತ ಸುದ್ದಿಯಾಯಿತು. ಆಕ್ರೋಶ ವ್ಯಕ್ತವಾಯಿತು.  ಗುರ್ಮೀತ್ ಹೇಳಿಕೆಯನ್ನು ಖಂಡಿಸಿ  ಎಬಿವಿಪಿ ಸದಸ್ಯರು ದೆಹಲಿ ಯೂನಿವರ್ಸಿಟಿಯ ರಾಮ್’ಜಾಸ್ ಕಾಲೇಜಿನಲ್ಲಿ ಗಲಭೆ ಎಬ್ಬಿಸಿದಾಗ ಅವರ ವಿರುದ್ಧ ಗುರ್ಮೀತ್ ಕೌರ್ ದನಿ ಎತ್ತಿದ್ದರು. ಆಗ ಸುದ್ದಿಯಾಗಿದ್ದರು. ಆನಂತರ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್  ಮಾಡಲಾಯಿತು. ಜೀವ ಬೆದರಿಕೆಯನ್ನು ಎದುರಿಸಬೇಕಾಯಿತು.

ಗುರ್ಮೀತ್ ಈಗಲೂ ಮೌನವಾಗಿಲ್ಲ. ದನಿ ಎತ್ತಿದ್ದಾರೆ. ಸ್ವಾತಂತ್ರ ಬಗ್ಗೆ ಪುಸ್ತಕವನ್ನು  ಬರೆಯುತ್ತಿದ್ದಾರೆ. ಮುಂದಿನ ವರ್ಷ ಪ್ರಕಟಗೊಳ್ಳಲಿದೆ. ಅವರ ದಿಟ್ಟತನ ನೋಡಿ ನಾವು ಅವರನ್ನು ಮುಂದಿನ 10 ನಾಯಕರ ಪಟ್ಟಿಗೆ ಆಯ್ಕೆ ಮಾಡಿದ್ದೇವೆ ಎಂದು ಟೈಮ್ ಮ್ಯಾಗಜಿನ್ ಹೇಳಿದೆ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ