ಉಚಿತ ಸ್ಮಾರ್ಟ್ ಫೋನ್'ಗಳು, ತಿಂಗಳಿಗೆ ಒಂದು ಸಾವಿರ ನಗದು: ಯಾರು ಕೊಡ್ತಿದ್ದಾರೆ ಗೊತ್ತಾ?

By Suvarna Web DeskFirst Published Feb 11, 2017, 4:39 PM IST
Highlights

ರೈತರಿಗೆ ಸಾಲ,ಕಡಿಮೆ ದರದಲ್ಲಿ ವಿದ್ಯುತ್, ಬೆಳೆಗಳಿಗೆ ಬೆಂಬಲ ಬೆಲೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ,ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಶೇ.50 ಮೀಸಲಾತಿ

ಲಖನೌ(ಫೆ.11): ಯುವಕರಿಗೆ ಉಚಿತ ಸ್ಮಾರ್ಟ್ ಫೋನ್'ಗಳು, ಬಡವರಿಗೆ ತಿಂಗಳಿಗೆ ಒಂದು ಸಾವಿರ ನಗದು, 20 ಲಕ್ಷ ಯುವ ಜನತೆಗೆ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಉದ್ಯೋಗ ಖಾತರಿ ಇದನೆಲ್ಲ ನೀಡುತ್ತಿರುವುದು ಮತ್ಯಾರು ಅಲ್ಲ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಇವೆಲ್ಲವನ್ನು ಸುಮ್ಮನೆ ನೀಡುವುದಿಲ್ಲ  ಉತ್ತರ ಪ್ರದೇಶದ ಜನತೆ ಎಸ್'ಪಿಯನ್ನು ಭಾರಿ ಬಹುಮತದಿಂದ ಗೆಲ್ಲಿಸಬೇಕು. ಅಂದರೆ 403 ಸೀಟುಗಳಲ್ಲಿ 300 ಕ್ಷೇತ್ರಗಳಲ್ಲಿ  ಗೆಲ್ಲಿಸಿಕೊಟ್ಟರೆ ಮೇಲಿನ ಯೋಜನೆಗಳ ಜೊತೆ ರೈತರಿಗೆ ಸಾಲ,ಕಡಿಮೆ ದರದಲ್ಲಿ ವಿದ್ಯುತ್, ಬೆಳೆಗಳಿಗೆ ಬೆಂಬಲ ಬೆಲೆ, ಸರ್ಕಾರಿ ಉದ್ಯೋಗದಲ್ಲಿ  ಮಹಿಳೆಯರಿಗೆ ಶೇ.33 ಮೀಸಲಾತಿ,ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಶೇ.50 ಮೀಸಲಾತಿ, 5 ವರ್ಷದಲ್ಲಿ  ವಿದ್ಯುತ್, ರಸ್ತೆ ಹಾಗೂ ನೀರಾವರಿ ವ್ಯವಸ್ಥೆ, 10 ಲಕ್ಷ ಬಡ ದಲಿತ ಹಾಗೂ ಹಿಂದುಳಿದ ಕುಟುಂಬಗಳಿಗೆ ಉಚಿತ ಗೃಹ ನಿರ್ಮಾಣ ಇದು ಎಸ್'ಪಿ ಹಾಗೂ ಕಾಂಗ್ರೆಸ್'ನ ಚುನಾವಣಾ ಪ್ರಣಾಳಿಕೆಗಳು. ಮಾರ್ಚ್ 11 ರ ಚುನಾವಣಾ ಫಲಿತಾಂಶದ ನಂತರ ಎಸ್'ಪಿ ವಿಜಯ ಮಾಲೆ ಧರಿಸಿದರೆ ಉತ್ತರ ಪ್ರದೇಶ ಜನತೆ ಮೇಲಿನ ಯೋಜನೆಗಳ ಬಗ್ಗೆ ಕನಸು ಕಾಣಬಹುದು.
click me!