
ನವದೆಹಲಿ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ದುರ್ಬಳಕೆ ಮಾಡಿಕೊಂಡು ಚಾಲಕರು ಮಹಿಳೆಯರನ್ನು ಕೂಡಿಹಾಕಿ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ಸಾಕಷ್ಟು ಕೇಳಿಬರುತ್ತಿರುತ್ತಿವೆ. ಆದರೆ, ಈಗ ಅಂತ ಹ ಸನ್ನಿವೇಶಗಳನ್ನು ತಪ್ಪಿಸಲು ಮುಂದಿನ ವರ್ಷದ ಜುಲೈನಿಂದ ಕ್ಯಾಬ್ ಮತ್ತು ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ಅಳವಡಿಸದಿರಲು ವಾಹನ ಉತ್ಪಾದಕರು ನಿರ್ಧರಿಸಿದ್ದಾರೆ.
ಕ್ಯಾಬ್‌ಗಳಲ್ಲಿ ಮಕ್ಕಳ ಜೊತೆ ದೊಡ್ಡ ವರೂ ಇರುವುದರಿಂದ ಚೈಲ್ಡ್ ಲಾಕ್ ಅಗತ್ಯವಿಲ್ಲ ಎಂದು ಭಾವಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಂತಹ ವಾಹನಗಳಲ್ಲಿ ಚೈಲ್ಡ್ ಲಾಕ್ ಇರದಂತೆ ನೋಡಿಕೊಳ್ಳಬೇಕಾಗಿದೆ. ಈ ಪ್ರಕಾರ, ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸದ ವಾಹನಗಳಿಗೆ ಆರ್‌ಟಿಒ ಫಿಟ್‌ನೆಸ್ ಸರ್ಟಿಫಿಕೇಟ್ ನಿರಾಕರಿಸಬಹುದು. ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಚೈಲ್ಡ್ ಲಾಕ್ ಬಳಸಿಕೊಂಡು ಮಹಿಳೆಯರ ಮೇಲೆ ಕಿರುಕುಳ ನಡೆಸಲಾಗಿತ್ತು. ಹೀಗಾಗಿ ಟ್ಯಾಕ್ಸಿ ಮತ್ತು ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ನಿಷ್ಕ್ರಿಯಕ್ಕೆ ಬೇಡಿಕೆ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.