ಕರ್ನಾಟಕ, ಮಹಾರಾಷ್ಟ್ರ ಪ್ರವಾಹದಿಂದ ದೇಶಕ್ಕೆ ಈಗ ಈರುಳ್ಳಿ ಕೊರತೆ ಭೀತಿ!

By Web DeskFirst Published Aug 22, 2019, 4:47 PM IST
Highlights

ಕರ್ನಾಟಕ, ಮಹಾರಾಷ್ಟ್ರ ಪ್ರವಾಹದಿಂದ ದೇಶಕ್ಕೆ ಈಗ ಈರುಳ್ಳಿ ಕೊರತೆ ಭೀತಿ| ಮಾರುಕಟ್ಟೆಗೆ ಬಿಡದೇ ಈರುಳ್ಳಿ ದಾಸ್ತಾನು ಇಟ್ಟುಕೊಂಡಿದ್ದು ಕಂಡು ಬಂದರೆ ಕಠಿಣ ಕ್ರಮ : ಸರ್ಕಾರ ಎಚ್ಚರಿಕೆ

ನವದೆಹಲಿ[ಆ.22]: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ದೇಶದಲ್ಲಿ ಈರುಳ್ಳಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಮಾರುಕಟ್ಟೆಗೆ ಬಿಡದೇ ಈರುಳ್ಳಿ ದಾಸ್ತಾನು ಇಟ್ಟುಕೊಂಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈರುಳ್ಳಿಯ ಬೆಲೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಪ್ರತಿ ಕೆ.ಜಿ.ಗೆ 24 ರು.ಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಡಿವಾಣ ಹಾಕಲು ನಿರ್ಧರಿಸಲಾಗಿದೆ.

ಅಲ್ಲದೇ ಗ್ರಾಹಕ ವ್ಯವಹಾರಗಳ ಇಲಾಖೆ ಆಗಾಗ ಈರುಳ್ಳಿ ದರದ ಮೇಲ್ವಿಚಾರಣೆ ಮಾಡಲಿದೆ.

click me!