ಆಫ್ರಿಕಾದಿಂದ ಬೆಂಗಳೂರಿಗೆ 4 ದಿನ ವಿಮಾನಯಾನ ಸೇವೆ

Published : Sep 15, 2019, 10:24 AM IST
ಆಫ್ರಿಕಾದಿಂದ ಬೆಂಗಳೂರಿಗೆ 4 ದಿನ ವಿಮಾನಯಾನ ಸೇವೆ

ಸಾರಾಂಶ

 ‘ಇಥಿಯೋಪಿಯಾ ಏರ್‌ಲೈನ್ಸ್‌’ ಮತ್ತು ಸ್ಕೈಟ್ರಾಕ್ಸ್‌ ಮಾನ್ಯತೆ ಪಡೆದಿರುವ ಜಾಗತಿಕ ವಾಯುಯಾನ ಸಂಸ್ಥೆ ‘ಪೋರ್‌ ಸ್ಟಾರ್‌ ಏರ್‌ಲೈನ್ಸ್‌’ ಆಫ್ರಿಕಾ ಖಂಡ ಇಥಿಯೋಪಿಯಾದ ದೇಶದ ರಾಜಧಾನಿ ಅಡಿಸ್‌ ಅಬಾಬಾದಿಂದ ಬೆಂಗಳೂರು ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದೆ.

ಬೆಂಗಳೂರು [ಸೆ.15]:  ಆಫ್ರಿಕಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ‘ಇಥಿಯೋಪಿಯಾ ಏರ್‌ಲೈನ್ಸ್‌’ ಮತ್ತು ಸ್ಕೈಟ್ರಾಕ್ಸ್‌ ಮಾನ್ಯತೆ ಪಡೆದಿರುವ ಜಾಗತಿಕ ವಾಯುಯಾನ ಸಂಸ್ಥೆ ‘ಪೋರ್‌ ಸ್ಟಾರ್‌ ಏರ್‌ಲೈನ್ಸ್‌’ ಆಫ್ರಿಕಾ ಖಂಡ ಇಥಿಯೋಪಿಯಾದ ದೇಶದ ರಾಜಧಾನಿ ಅಡಿಸ್‌ ಅಬಾಬಾದಿಂದ ಬೆಂಗಳೂರು ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದೆ.

ಭಾರತಕ್ಕೆ ವಿಮಾನ ಸೇವೆ ವಿಸ್ತರಿಸುವ ಉದ್ದೇಶದಿಂದ ಅ.27ರಿಂದ ಆಫ್ರಿಕಾದಿಂದ ಬೆಂಗಳೂರಿಗೆ ನಾಗರಿಕ ಮಾನಯಾನ ಸೇವೆ ಪ್ರಾರಂಭಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಇಥಿಯೋಪಿಯಾ ಏರ್‌ಲೈನ್ಸ್‌ನ ಉಪಖಂಡದ ಪ್ರಾದೇಶಿಕ ನಿರ್ದೇಶಕ ತದೇಸ್‌್ಸ ಟಿಲಹುನ್‌ ಮಾತನಾಡಿ, ಕಳೆದ 40 ವರ್ಷಗಳಿಂದ ನಿರಂತರವಾಗಿ ಆಫ್ರಿಕಾದಿಂದ ಮುಂಬೈಗೆ ವಿಮಾನ ಸೇವೆ ಒದಗಿಸಲಾಗುತ್ತಿದೆ. ಈಗ ಬೆಂಗಳೂರು ನಗರಕ್ಕೂ ಸೇವೆ ಕಲ್ಪಿಸಲಾಗುತ್ತಿದೆ ಎಂದರು.

ಹೆಚ್ಚುನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ಮಾಹಿತಿ, ಜೈವಿಕ ತಂತ್ರಜ್ಞಾನವಷ್ಟೇ ಅಲ್ಲದೆ ಬಯೋ ತಂತ್ರಜ್ಞಾನ ಕ್ಲಸ್ಟರ್‌ ಆಗಿಯೂ ಜಗತ್ತಿನ ಗಮನ ಸೆಳೆದಿದೆ. ಇಂಥ ನಗರವನ್ನು ಸಂಪರ್ಕಿಸಲು ವಾರದಲ್ಲಿ ನಾಲ್ಕು ದಿನಗಳ ಕಾಲ ನೇರ ವಿಮಾನ ಸೇವೆ ಸಿಗಲಿದೆ. ಅ.27ರಿಂದ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಇಥಿಯೋಪಿಯಾದಿಂದ ವಿಮಾನಗಳು ಹೊರಡಲಿವೆ. ಇನ್ನು ಬೆಂಗಳೂರಿನಿಂದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರಗಳಂದು ವಿಮಾನ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಮುಂಬೈ ಮತ್ತು ದೆಹಲಿ ನಡುವೆ ದಿನನಿತ್ಯ ಎರಡು ವಿಮಾನಗಳು ಹಾರಾಡುತ್ತಿವೆ. ಬೆಂಗಳೂರು, ಅಹಮದಾಬಾದ್‌, ಚೆನ್ನೈ, ಮುಂಬೈ, ನವದೆಹಲಿ ನಡುವೆ ಕಾರ್ಗೋ ಸೇವೆ ಲಭ್ಯವಿದೆ. ದಕ್ಷಿಣ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳನ್ನು ಹೊರತು ಪಡಿಸಿ, ಜಗತ್ತಿನ ವಿವಿಧೆಡೆಗಳಿಗೆ ವಿಮಾನ ಸೇವೆಗೆ ವ್ಯಾಪಕ ಬೇಡಿಕೆ ಕಂಡು ಬಂದಿದೆ. ಆಫ್ರಿಕಾದಿಂದ ಬೆಂಗಳೂರಿಗೆ ಆರಂಭಿಸುತ್ತಿರುವ ವಿಮಾನ ಸೇವೆ ತಡೆರಹಿತವಾಗಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ