PUBG ಆಡಬೇಡಿ ಎಂದಿದ್ದಕ್ಕೆ ಮನೆ ಬಿಟ್ಟ ಐವರು ಅಪ್ರಾಪ್ತರು: ಮುಂದೆ?

Published : Jul 25, 2019, 09:14 PM IST
PUBG ಆಡಬೇಡಿ ಎಂದಿದ್ದಕ್ಕೆ ಮನೆ ಬಿಟ್ಟ ಐವರು ಅಪ್ರಾಪ್ತರು: ಮುಂದೆ?

ಸಾರಾಂಶ

PUBG ಆಡ್ಬೇಡಿ ಎಂದಿದ್ದಕ್ಕೆ ಮಬೆ ಬಿಟ್ಟ ಐವರು ಅಪ್ರಾಪ್ತರು| ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದ ಘಟನೆ| ದೆಹಲಿಯಲ್ಲಿ ಪತ್ತೆಯಾದ ಮನೆ ಬಿಟ್ಟ ಐವರು ಬಾಲಕರು| ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ ಪೊಲೀಸರು|

ಡೆಹ್ರಾಡೂನ್(ಜು.25): PUBG ಆಟ ಆಡದಂತೆ ಪೋಷಕರು ಗದರಿಸಿದ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತರು ಮನೆ ಬಿಟ್ಟ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದಿದೆ.

PUBG ಆಟಕ್ಕೆ ಮನಸೋತ ಅಪ್ರಾಪ್ತರು ನಿರಂತರವಾಗಿ ಆಟದಲ್ಲಿ ತಲ್ಲೀನರಾಗಿರುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಆಟ ಆಡದಂತೆ ಗದರಿಸಿದ್ದಾರೆ.

ಇದರಿಂದ ಬೇಸತ್ತ ಅಪ್ರಾಪ್ತರು ಮನೆ ಬಿಟ್ಟು ಹೋಗಿದ್ದರು. ಇದರಿಂದ ಗಾಬರಿಗೊಂಡಿದ್ದ ಪೋಷಕರು ಪೊಲೀಸರಿಗೆ ತಮ್ಮ ಮಕ್ಕಳು ಕಾಣೆಯಾದ ಕುರಿತು ದೂರು ನೀಡಿದ್ದರು.

ಸದ್ಯ ಐವರೂ ಬಾಲಕರನ್ನು ದೆಹಲಿಯಲ್ಲಿ ಪತ್ತೆ ಮಾಡಲಾಗಿದ್ದು, ಪೋಷಕರ ಮಡಿಲಿಗೆ ಸುರಕ್ಷಿತವಾಗಿ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
ಗೃಹಲಕ್ಷ್ಮೀ ಯೋಜನೆ ಹಣ ಬಾಕಿ ಇದ್ರೆ ಕೂಡಲೇ ಬಿಡುಗಡೆ: ಸಿಎಂ ಸಿದ್ದರಾಮಯ್ಯ ಭರವಸೆ