
ಬೆಂಗಳೂರು(ನ.12): ಹೈಕೋರ್ಟ್ ರಿಜಿಸ್ಟ್ರಾರ್ ಜಾನ್ ಮೈಖಲ್ ಖುನ್ಹ ಸೇರಿದಂತೆ ಐವರು ನ್ಯಾಯಾೀಶರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸುಪ್ರೀಂಕೋರ್ಟ್‌ನ ಕೊಲಿಜಿಯಂ 77 ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಇದರಲ್ಲಿ 34 ಹೆಸರುಗಳನ್ನು ಅಂತಿಮಗೊಳಿಸಿರುವ ಕೇಂದ್ರ ಸರ್ಕಾರ, ಉಳಿದವುಗಳನ್ನು ಮರುಪರಿಶೀಲನೆಗಾಗಿ ವಾಪಸ್ ಕಳುಹಿಸಿದೆ.
ರಾಜ್ಯದಿಂದ ಹೈಕೋರ್ಟ್‌ಗೆ ಹೋಗುತ್ತಿರುವವರಲ್ಲಿ ನ್ಯಾ. ಖುನ್ಹ ಅವರೂ ಸೇರಿದ್ದಾರೆ. ಇವರು ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿ, ಜೈಲಿಗೆ ಕಳುಹಿಸಿದ್ದರು.
ಜತೆಗೆ, ನ್ಯಾಯಾೀಶರಾದ ಕೆ. ಸೋಮಶೇಖರ್, ಕೆ.ಎಸ್.ಮುದಗಲ್, ಎಸ್.ಎಚ್.ಕುಮಾರ್ ಮತ್ತು ಬಿ.ಎ. ಪಾಟೀಲ್‌ರವರನ್ನು ಮುಂದಿನ ಎರಡು ವರ್ಷಗಳ ಅವಗಾಗಿ ಹೈಕೋರ್ಟ್‌ಗಳ ಹೆಚ್ಚುವರಿ ನ್ಯಾಯಾೀಶರನ್ನಾಗಿ ನೇಮಕ ಮಾಡಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ರಾಜ್ಯ ಕೊಲಿಜಿಯಂ ಎಂಟು ಮಂದಿಯ ಹೆಸರನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಿತ್ತು. ಜತೆಗೆ ಬಾರ್ ಕೌನ್ಸಿಲ್ ಕೂಡ 6 ಮಂದಿಯ ಹೆಸರನ್ನು ಕಳಿಸಿತ್ತು. ಇವರಲ್ಲಿ ಕೇಂದ್ರ ಸರ್ಕಾರದ ಶಿಾರಸಿನಂತೆ 5 ಮಂದಿ ನ್ಯಾಯಾೀಶರ ಹೆಸರುಗಳನ್ನು ನೇಮಕ ಮಾಡಿ, ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಯಿದ್ದು, ಸದ್ಯ 25 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನೇಮಕದೊಂದಿಗೆ ಮತ್ತೆ ಐವರು ಸೇರ್ಪಡೆಗೊಳ್ಳಲಿದ್ದಾರೆ. ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ, ಏಪ್ರಿಲ್‌ನಲ್ಲಿ ನ್ಯಾ. ಆನಂದ ಬೈರಾರೆಡ್ಡಿ, ಜೂನ್‌ನಲ್ಲಿ ನ್ಯಾ. ಎ.ಎನ್.ವೇಣುಗೋಪಾಲಗೌಡ ಹಾಗೂ ಜುಲೈ ತಿಂಗಳಿನಲ್ಲಿ ನ್ಯಾ. ಬಿ.ಮನೋಹರ ಅವರು ನಿವೃತ್ತರಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.