ರಸ್ತೆಯಲ್ಲಿತ್ತು ರಾಶಿ ರಾಶಿ ಮೀನು, ಮೀನಿಗಾಗಿ ಮುಗಿಬಿದ್ದ ಜನರು!

Published : Dec 09, 2016, 10:23 AM ISTUpdated : Apr 11, 2018, 01:08 PM IST
ರಸ್ತೆಯಲ್ಲಿತ್ತು ರಾಶಿ ರಾಶಿ ಮೀನು, ಮೀನಿಗಾಗಿ ಮುಗಿಬಿದ್ದ ಜನರು!

ಸಾರಾಂಶ

ಬೆಂಗಳೂರಿನಿಂದ ಮುಂಬೈಗೆ ನಾಲ್ಕು ಟನ್ ವಿವಿಧ ಜಾತಿಯ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಎದುರಾದ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿತ್ತು. ಮೀನುಗಳೆಲ್ಲಾ ಹೊರ ಬಿದ್ದಿದ್ದರಿಂದ ಸ್ಥಳೀಯ ಜನರೆಲ್ಲಾ ಮೀನುಗಳನ್ನು ಚೀಲಗಳಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಲಾರಿಯಲ್ಲಿದ್ದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೀನುಗಳನ್ನು ಜನರು ಹೊತ್ತೊಯ್ದರು.

ಧಾರವಾಡ(ಡಿ.09):  ಮೀನಿನ ಲಾರಿಯೊಂದು ಉರುಳಿ ಬಿದ್ದು, ಮೀನಿಗಾಗಿ ಜನರೆಲ್ಲಾ ಮುಗಿಬಿದ್ದ ಘಟನೆ ಧಾರವಾಡ ಹೊರ  ಯರಿಕೊಪ್ಪ ಬೈಪಾಸ್ ಬಳಿ ನಡೆದಿದೆ.

ಬೆಂಗಳೂರಿನಿಂದ ಮುಂಬೈಗೆ ನಾಲ್ಕು ಟನ್ ವಿವಿಧ ಜಾತಿಯ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಎದುರಾದ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿತ್ತು. ಮೀನುಗಳೆಲ್ಲಾ ಹೊರ ಬಿದ್ದಿದ್ದರಿಂದ ಸ್ಥಳೀಯ ಜನರೆಲ್ಲಾ ಮೀನುಗಳನ್ನು ಚೀಲಗಳಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಲಾರಿಯಲ್ಲಿದ್ದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಮೀನುಗಳನ್ನು ಜನರು ಹೊತ್ತೊಯ್ದರು.

ಲಾರಿ ಮೇಲೆತ್ತುವ ಕಾರ್ಯಾಚರಣೆ ವೇಳೆಯೂ ಮೀನಿಗಾಗಿ ಮುಗಿಬಿದ್ದ ಜನರು ಅಡಚಣೆ ಉಂಟು ಮಾಡಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಲಾಠಿ ಕೂಡ ಬೀಸಬೇಕಾಯ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾತ್ಮಾ ಗಾಂಧಿ ನನ್ನ ಕುಟುಂಬ ಸದಸ್ಯರಲ್ಲ, ಬಿಲ್ ವಿರೋಧ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಹೇಳಿದ್ದೇನು?
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!