ರಾಹುಲ್ ಪ್ರಧಾನಿಯಾದ ತಕ್ಷಣ ಈ ಕೆಲ್ಸ ಮಾಡ್ತಾರಂತೆ!

By Web DeskFirst Published Sep 19, 2018, 5:03 PM IST
Highlights

ರಾಹುಲ್ ಪ್ರಧಾನಿಯಾದ್ರೆ ಏನ್ಮಾಡ್ತರಂತೆ ಗೊತ್ತಾ?! ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಫೈಲ್‌ಗೆ ಸಹಿ! ಆಂಧ್ರದ ಜನೆತೆಗೆ ಕಾಂಗ್ರೆಸ್ ಅಧ್ಯಕ್ಷರ ಭರವಸೆ! ವಿಶೇಷ ಸ್ಥಾನಮಾನ ನೀಡುವುದು ಕೇಂದ್ರದ ಜವಾಬ್ದಾರಿ

ನವದೆಹಲಿ(ಸೆ.19): 'ನಾನು ಪ್ರಧಾನಿಯಾದ ಮರುಕ್ಷಣವೇ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಫೈಲ್‌ಗೆ ಮೊದಲು ಸಹಿ ಹಾಕುತ್ತೇನೆ'. ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭರವಸೆಯ ನುಡಿ. 

ಆಂಧ್ರದ ಕರ್ನೂಲ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್, ಮುಂದಿನ ಲೋಕಸಭೆ ಚುನಾವಣೆ ಬಳಿಕ ತಾವು ಪ್ರಧಾನಿಯಾದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಮೊದಲ ಆದ್ಯತೆ ಕೊಡುವುದಾಗಿ ತಿಳಿಸಿದ್ದಾರೆ. 

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದು ಕೇಂದ್ರದ ಜವಾಬ್ದಾರಿಯೇ ಹೊರತು ಉಡುಗೊರೆಯಲ್ಲ. ರಾಜ್ಯಗಳನ್ನು ವಿಭಜನೆ ಮಾಡುವ ವೇಳೆ ನೀಡಿರುವ ಭರವಸೆಗಳ ಬಗ್ಗೆ ತಮಗೂ ಅರಿವಿದೆ ಎಂದು ರಾಹುಲ್ ಹೇಳಿದ್ದಾರೆ. ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಅಂಶಗಳು ನ್ಯಾಯಯುತವಾದವು ಎಂದು ಅವರು ಅಭಿಪ್ರಾಯೊಪಟ್ಟಿದ್ದಾರೆ. 

ಇದೇ ವೇಳೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್, ವಿಶೇಷ ಸ್ಥಾನಮಾನ ನಿರಾಕರಿಸುವ ಮೂಲಕ ಬಿಜೆಪಿ ಆಂಧ್ರದ ಜನತೆಗೆ ಮೋಸ ಮಾಡಿದೆ ಎಂದು ಆರೋಪಿಸಿದರು. ಒಂದು ವೇಳೆ, ನಾನು ಪ್ರಧಾನಿಯಾದ ನಂತರ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದರೆ ಮತ್ತೊಮ್ಮೆ ಆಂಧ್ರ ಪ್ರದೇಶಕ್ಕೆ ಕಾಲಿಡುವುದಿಲ್ಲ ಎಂದೂ ರಾಹುಲ್ ವಾಗ್ದಾನ ಮಾಡಿದರು.

click me!