
ಪೋರ್ ಬಂದರ್(ನ.20): ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿರುವಾಗಲೇ ಬೋಟ್`ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೀನುಗಾರ ಸಾವಿಗೀಡಾದ ಭೀಕರ ಘಟನೆ ಗುಜರಾತ್ ಕರಾವಳಿಯಲ್ಲಿ ನಡೆದಿದೆ. ಗುಜರಾತ್`ನ ಪೋರ್ ಬಂದರ್ ಸಮೀಪ ಅರೇಬಿಯನ್ ಸಮುದ್ರದಲ್ಲಿ ಈ ಘಟನೆ ನಡೆದಿದೆ.
ಕೃಷ್ಣರಾಜ್ ಎಂಬ ಮೀನುಗಾರಿಕಾ ಬೋಟ್`ನಲ್ಲಿ ಮೀನು ಹಿಡಿಯುವುದರಲ್ಲಿ ತೊಡಗಿದ್ದಾಗ ದಿಢೀರನೇ ಬೋಟ್`ಗೆ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಓರ್ವ ಮೀನುಗಾರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾದಳ ಬೋಟ್ ನಲ್ಲಿದ್ದ ಇತರೆ ಐವರನ್ನು ರಕ್ಷಿಸಿದ್ದಾರೆ. ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುರಂತಕ್ಕೀಡಾದ ಬೋಟ್ ಅನ್ನು ದಿಕ್ಸಾ ಎಂಬ ಟೋಯಿಂಗ್ ಬೋಟ್ ಮೂಲಕ ದಡಕ್ಕೆ ಎಳೆದು ತರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.