
ಬೆಂಗಳೂರು(ಜು.27): ರಾಜ್ಯಸಭಾ ಚುನಾವಣೇ ವೇಳೆ ಲಂಚದ ಬೇಡಿಕೆ ಇಟ್ಟಿದ ಆರೋಪದ ಮೇಲೆ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ವಿರುದ್ಧ ಎಫ್'ಐಆರ್ ದಾಖಲಾಗಿದೆ.
2016ರ ಜೂನ್ 11ರಂದು ರಾಜ್ಯಸಭಾ ಚುನಾವಣೆ ಮತದಾನದ ಹಿನ್ನಲೆಯಲ್ಲಿ ರಾಷ್ಟ್ರೀಯ ವಾಹಿನಿ ನಡೆಸಿದ್ದ ಸ್ಟಿಂಗ್ ಆಪರೇಷನ್'ನಲ್ಲಿ ಸಿಕ್ಕಿ ಬಿದ್ದಿದ್ದ ಖೂಬಾ 5 ಕೋಟಿ ರೂ ಕೊಟ್ಟರೆ ತನ್ನ ಮತ ನೀಡುವುದಾಗಿ ಹೇಳಿದ್ದರು. ಅಲ್ಲದೆ ಇತರೆ ವಿಧಾನಸಭಾ ಸದಸ್ಯರ ಮತಗಳನ್ನೂ ಕೊಡಿಸುವುದಾಗಿ ಹೇಳಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಎಸ್.ಮೂರ್ತಿ ಅವರಿಂದ ಕೇಂದ್ರ ಚುನಾವಣಾ ಆಯೋಗ ವರದಿ ಕೇಳಿ ಸ್ಟಿಂಗ್ ಆಪರೇಷನ್ ಸಿಡಿ ಪರಿಶೀಲಿಸಿ FIR ದಾಖಲಿಸುವಂತೆ ಸೂಚಿಸಿತ್ತು. ಅಂದು ಚುನಾವಣಾಧಿಕಾರಿ ಎಸ್.ಮೂರ್ತಿ ಅವರು ಚುನಾವಣಾ ಆಯೋಗ ಸೂಚನೆಯಂತೆ ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮೂರ್ತಿ ಅವರು ಖೂಬಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ -1998, IPC 171 B ಅಡಿ FIR ದಾಖಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.