ಮಗನನ್ನು ಅಪಹರಿಸಿ, ಮತಾಂತರಿಸಿ, ಮದುವೆ ಮಾಡುತ್ತಿದ್ದಾರೆ: ತಂದೆಯ ಆರೋಪ

Published : Jun 07, 2017, 05:19 PM ISTUpdated : Apr 11, 2018, 01:13 PM IST
ಮಗನನ್ನು ಅಪಹರಿಸಿ, ಮತಾಂತರಿಸಿ, ಮದುವೆ ಮಾಡುತ್ತಿದ್ದಾರೆ: ತಂದೆಯ ಆರೋಪ

ಸಾರಾಂಶ

ತನ್ನ ಮಗನನ್ನು  ಇನ್ನೊಂದು ಧರ್ಮದ ವ್ಯಕ್ತಿ ಅಪಹರಿಸಿದ್ದು ಆತನ ಮಗಳೊಡನೆ ಬಲವಂತವಾಗಿ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ತಂದೆಯು ಆರೋಪಿಸಿದ್ದಾನೆ. ತನ್ನ ಅಪ್ರಾಪ್ತ ಮಗನ ಮದುವೆ ನಿಲ್ಲಿಸಿ, ಆತನನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ  ಕಾನೂನು ಕ್ರಮ ಜರುಗಿಸುವಂತೆ ತಂದೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮಂಡ್ಯ: ಮುಸ್ಲಿಂ ಮುಖಂಡನೊಬ್ಬ ಹಿಂದು ಜಾತಿಯ ಹುಡುಗನನ್ನು ಅಪರಿಹರಿಸಿ ಮುಸ್ಲಿಂ ಧರ್ಮಕ್ಕೆ  ಮಂತಾರಗೊಳಿಸಿ, ತನ್ನ ಮಗಳೊಂದಿಗೆ ಮದುವೆ ಮಾಡಲು ಹೊರಟಿದ್ದಾನೆ ಎಂದು, ಹುಡುಗನ ತಂದೆ ಫೋಲೀಸರಿಗೆ ದೂರು ನೀಡಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.

ಶ್ರೀನಿವಾಸ್ ಎಂಬ ವ್ಯಕ್ತಿ  ಹಿಂದೂಪರ ಸಂಘಟನೆಗಳೊಂದಿಗೆ ತೆರಳಿ, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.

ನನ್ನ ಮಗ ಚಂದನ್'​ನನ್ನು ಮುಸ್ಲಿಂ ಮುಖಂಡ ಯೂಸಫ್ ಎಂಬಾತ ಅಪಹರಿಸಿದ್ದು ತನ್ನ ಮಗಳೊಡನೆ ಮದುವೆ ಮಾಡಲು ಆತನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಮತಾಂತರ ಮಾಡಿಸಿ ಮದುವೆ ಮಾಡಲು  ಪ್ರಯತ್ನಿಸುತ್ತಿದ್ದಾನೆ. ನನ್ನ ಮಗನಿಗೆ ಈಗ 19 ವರ್ಷವಾಗಿದ್ದು ಈ ಮದುವೆ ಕಾನೂನು ಬಾಹಿರವಾಗುತ್ತದೆ. ಇದರಿಂದ ತನ್ನ ಅಪ್ರಾಪ್ತ ಮಗನ ಮದುವೆ ನಿಲ್ಲಿಸಿ, ಆತನನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವವರ ವಿರುದ್ಧ  ಕಾನೂನು ಕ್ರಮ ಜರುಗಿಸುವಂತೆ ತಂದೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದು, ಈ ಸಂಬಂಧ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳಕ್ಕೆ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ