
ಬೆಂಗಳೂರು : ವಿದ್ವತ್ ಮೇಲೆ ನಲಪಾಡ್’ನಿಂದ ಹಲ್ಲೆ ನಡೆದ ಫರ್ಜಿ ಕೆಫೆಯನ್ನು ಮುಚ್ಚಲಾಗಿದೆ. ರಿನೋವೇಷನ್ ನೆಪದಲ್ಲಿ ಕೆಫೆಯನ್ನು ಮುಚ್ಚಲಾಗಿದ್ದು, ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗಲಾಟೆಯ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಕೆಫೆಯನ್ನು ಮುಚ್ಚಿಸಿದ್ದಾರೆ. ಗಲಾಟೆಯ ದೃಶ್ಯಾವಳಿ ಯಾರಿಗೂ ಸಿಗಬಾರದೆಂದು, ಸಾಕ್ಷ್ಯ ನಾಶಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸರು ಮುಂದಾದರಾ ಎನ್ನು ಶಂಕೆ ಮೂಡಿದೆ. ಅಲ್ಲದೇ ರಹಸ್ಯ ಕ್ಯಾಮರಾದಲ್ಲಿ ಎಲ್ಲಾ ದೃಶ್ಯಾವಳಿಗಳೂ ಕೂಡ ಸೆರೆಯಾಗಿದೆ.
ಅಂದು ಹೋಟೆಲ್’ನಲ್ಲಿ ನಡೆದಿದ್ದೇನು..?
ಇನ್ನು ಅಂದು ನಡೆದ ಗಲಾಟೆಯಲ್ಲಿ ಏನಾಗಿದೆ ಎಂದು ಗಮನಿಸಿದಲ್ಲಿ ಮೂವರು ಗೆಳೆಯರೊಂದಿಗೆ ವಿದ್ವತ್ ಅಂದು ಕೆಫೆಗೆ ತೆರಳಿದ್ದನೆನ್ನಲಾಗಿದೆ. ಪ್ರವೀಣ್ ವೆಂಕಟಾಚಲ, ಕಿರಣ್ ಹಾಗೂ ಮತ್ತೋರ್ವ ವ್ಯಕ್ತಿಯೊಂದಿಗೆ ತೆರಳಿದ್ದ. ವಿದ್ವತ್ ಫರ್ಜಿ ಕೆಫೆಯ ಕಾರ್ನರ್ ಟೇಬಲ್’ನಲ್ಲಿ ಪ್ರವೀಣ್ ಜೊತೆ ಕುಳಿತಿದ್ದ.
ಈ ವೇಳೆ ಒಟ್ಟು 7 ಮಂದಿಯೊಂದಿಗೆ ನಲಪಾಡ್ ಅಲ್ಲಿದೆ ಬಂದಿದ್ದ. ನಲಪಾಡ್ ಈ ವೇಳೆ ಶಾಂಪೈನ್ ಓಪನ್ ಮಾಡಿದ್ದು, ಶಾಂಪೈನ್ ವಿದ್ವತ್ ಕಾಲಿನ ಮೇಲೆ ಚೆಲ್ಲಿತ್ತು. ಇದರಿಂದ ವಿದ್ವತ್ ಇದನ್ನು ಪ್ರಶ್ನೆ ಮಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ.
ಬಳಿಕ ನಲಪಾಡ್'ಗೆ ಹಾಗೂ ಆತನ ಸಹಚರರು ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕಿಸ್ ಮೈ ಫೂಟ್ ಎಂದು ಹೇಳಿದ್ದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.